[ಸುಳ್ಳು ಸುದ್ದಿ] ಇನ್ನಷ್ಟು ಜಾತಿ ಒಡೆವ ಭೀತಿ : ನಾಳೆಯೇ ಚುನಾವಣೆ ಘೋಷಣೆ

First Published 21, Mar 2018, 10:33 AM IST
Faking News Election Anounce Tommarow
Highlights

ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಮಾಡುವುದನ್ನು ಹೀಗೇ ವಿಳಂಬ ಮಾಡಿದರೆ ಇನ್ನಷ್ಟು ಜಾತಿ, ಧರ್ಮಗಳನ್ನು ಒಡೆದು ನಮ್ಮ ಮತ ಬ್ಯಾಂಕನ್ನೆಲ್ಲ ಕಾಂಗ್ರೆಸಿಗರು ಛಿದ್ರ ಮಾಡುತ್ತಾರೆ ಎಂದು ರಾಜ್ಯದ ಬಿಜೆಪಿ ನಾಯಕರು ಕೇಂದ್ರ ನಾಯಕರ ಬಳಿ ಗೋಳು ತೋಡಿಕೊಂಡಿದ್ದಾರೆ.

ಬೆಂಗಳೂರು : ಕರ್ನಾಟಕದಲ್ಲಿ ಚುನಾವಣೆ ಘೋಷಣೆ ಮಾಡುವುದನ್ನು ಹೀಗೇ ವಿಳಂಬ ಮಾಡಿದರೆ ಇನ್ನಷ್ಟು ಜಾತಿ, ಧರ್ಮಗಳನ್ನು ಒಡೆದು ನಮ್ಮ ಮತ ಬ್ಯಾಂಕನ್ನೆಲ್ಲ ಕಾಂಗ್ರೆಸಿಗರು ಛಿದ್ರ ಮಾಡುತ್ತಾರೆ ಎಂದು ರಾಜ್ಯದ ಬಿಜೆಪಿ ನಾಯಕರು ಕೇಂದ್ರ ನಾಯಕರ ಬಳಿ ಗೋಳು ತೋಡಿಕೊಂಡಿದ್ದಾರೆ.

ಈ ಹಿನ್ನೆಲೆಯಲ್ಲಿ ಕೇಂದ್ರ ಸರ್ಕಾರದಿಂದ ಚುನಾವಣಾ ಆಯೋಗಕ್ಕೆ ಸಂದೇಶ ರವಾನೆಯಾಗಿದ್ದು, ನಾಳೆಯೇ ಚುನಾವಣೆ ಘೋಷಣೆಯಾಗಲಿದೆ ಎಂದು ಗೊತ್ತಾಗಿದೆ.

ಚುನಾವಣೆ ಘೋಷಿಸಿದ ನಂತರ ನೀತಿ ಸಂಹಿತೆ ಜಾರಿಯಾಗುವುದರಿಂದ ರಾಜ್ಯ ಸರ್ಕಾರ ಯಾವುದೇ ನಿರ್ಧಾರ ಕೈಗೊಳ್ಳಲು ಆಗುವುದಿಲ್ಲ. ಹೀಗಾಗಿ ಜಾತಿ, ಧರ್ಮಗಳು ಭದ್ರವಾಗಿರುತ್ತವೆ ಎಂಬುದು ಬಿಜೆಪಿ ನಾಯಕರ ಲೆಕ್ಕಾಚಾರವಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.

loader