ಹಲವು ದಶಕಗಳಿಂದ ಕಮಲವನ್ನು ತನ್ನ ಗುರುತಾಗಿ ಮಾಡಿಕೊಂಡಿರುವ ಬಿಜೆಪಿ ಇದೀಗ ಆ ಚಿಹ್ನೆಯನ್ನೇ ಬದಲಿಸಲು ನಿರ್ಧರಿಸಿದೆ.

ನವದೆಹಲಿ: ಹಲವು ದಶಕಗಳಿಂದ ಕಮಲವನ್ನು ತನ್ನ ಗುರುತಾಗಿ ಮಾಡಿಕೊಂಡಿರುವ ಬಿಜೆಪಿ ಇದೀಗ ಆ ಚಿಹ್ನೆಯನ್ನೇ ಬದಲಿಸಲು ನಿರ್ಧರಿಸಿದೆ.

ಸಮಗ್ರ ಸುದ್ದಿ ಮೂಲವನ್ನಾಗಿ asianet suvarna news ಅನ್ನು ಆಯ್ಕೆ ಮಾಡಿಕೊಳ್ಳಿgooglePreferred

ಇದಕ್ಕೆ ಕಾರಣ ನಟ ಕಮಲ ಹಾಸನ್ ಅವರ ರಾಜಕೀಯ ಪಕ್ಷದ ಆರಂಭ. ಕಮಲ ಹಾಸನ್ ಅವರ ರಾಜಕೀಯ ಪಕ್ಷವು ಮುಂದಿನ ಲೋಕಸಭೆ ಚುನಾವಣೆಯಲ್ಲೂ ಸ್ಪರ್ಧಿಸಲಿದೆ.

ಆಗ ಕಮಲಕ್ಕೆ ಮತ ಹಾಕಿ ಎಂದು ಬಿಜೆಪಿಯವರು ಪ್ರಚಾರ ಮಾಡಿದರೆ ಜನರು ‘ಕಮಲ ಹಾಸನ್‌ಗೆ ಮತ ಹಾಕಬೇಕು’ ಎಂದು ತಪ್ಪು ತಿಳಿದುಕೊಳ್ಳುವ ಸಾಧ್ಯತೆಯಿದೆ. ಅದರಿಂದ ತಮಗೆ ನಷ್ಟವಾಗಲಿದೆ ಎಂದು ಬಿಜೆಪಿ ಈಗಲೇ ಎಚ್ಚೆತ್ತುಕೊಂಡಿದ್ದು, ಪಕ್ಷದ ಚಿಹ್ನೆಯನ್ನು ಬದಲಿಸಲು ಮುಂದಾಗಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ. (ಸುಳ್‌ಸುದ್ದಿ ವಾರ್ತೆ)