ಬೆಂಗಳೂರು :  ಮಾಜಿ ಸಚಿವ ರಮೇಶ್ ಜಾರಕಿಹೊಳಿ ಎಲ್ಲಿದ್ದಾರೆ, ಹೇಗಿದ್ದಾರೆ ಎಂದು ಕರ್ನಾಟಕದ ರಾಜಕಾರಣಿಗಳು ತಲೆಕೆಡೆಸಿಕೊಂಡಿದ್ದರೆ ಅವರು ಮಾತ್ರ ಚೀನಾ ಪ್ರವಾಸಕ್ಕೆ ಹೋಗಿದ್ದಾರೆ. 

ರಮೇಶ್ ಜಾರಕಿಹೊಳಿ ಅವರಿಗೆ ಸ್ವಂತ ಸಕ್ಕರೆ ಕಾರ್ಖಾನೆ ಇದೆ. ಆ ಕಾರ್ಖಾನೆಯ ಆದಾಯ ಹೇಗೆ ಹೆಚ್ಚಳ ಮಾಡಬಹುದು ಎನ್ನುವ ಕುರಿತು ಅವರು ಕಾರ್ಖಾನೆ ಅಧಿಕಾರಿಗಳ ಜತೆಗೆ ಇತ್ತೀಚೆಗಷ್ಟೇ ಗಂಭೀರ ಚರ್ಚೆ ಮಾಡಿದ್ದರು. ಆಗ ಚೀನಾ ಮಾದರಿ ಅನುಸರಿಸಿದರೆ ಹೇಗೆ ಎನ್ನುವ ಪ್ರಸ್ತಾಪ ಅಧಿಕಾರಿಗಳಿಂದ ಬಂದಿತ್ತಂತೆ. 

ಈ ಹಿನ್ನೆಲೆಯಲ್ಲಿ ಜಾರಕಿಹೊಳಿ ಅವರು ಒಂದು ಕೈ ನೋಡಿಯೇ ಬಿಡೋಣ ಎಂದು ಮುಂಬೈ ಮೂಲಕ ಚೀನಾಗೆ ತೆರಳಿದ್ದಾರೆ. ಮುಂದಿನ ವಾರ ರಮೇಶ್ ಜಾರಕಿಹೊಳಿ ಅವರು ಬೆಳಗಾವಿಗೆ ಆಗಮಿಸುವ ಸಾಧ್ಯತೆ ಇದೆ ಎಂದು ಸುಳ್‌ಸುದ್ದಿ ಸಂಸ್ಥೆಗೆ ಮೂಲಗಳು ತಿಳಿಸಿವೆ.

[ಸುಳ್ ಸುದ್ದಿ - ಕೇವಲ ಮನರಂಜನೆಗಾಗಿ ]