Asianet Suvarna News Asianet Suvarna News

ಇಳಿಯುತ್ತಿರುವ ಪೆಟ್ರೋಲ್ ದರ : ಗ್ರಾಹಕರ ಸೆಳೆಯಲು ಹೊಸ ಪ್ಲಾನ್ ?

ಗ್ರಾಹಕರನ್ನು ಸೆಳೆಯುವ ನಿಟ್ಟಿನಿಂದ ಪೆಟ್ರೋಲ್ ದರ ಒಂದು ಪೈಸೆಯಷ್ಟು ಇಳಿದರೂ ಅದನ್ನು ದೊಡ್ಡದಾಗಿ ತೋರಿಸುವ ಡಿಜಿಟಲ್ ಫಲಕವನ್ನು ಅಳವಡಿಸಲಾಗುತ್ತಿದೆ. 

Faking News About Petrol Price
Author
Bengaluru, First Published Oct 22, 2018, 12:47 PM IST
  • Facebook
  • Twitter
  • Whatsapp

ಬೆಂಗಳೂರು :  ಕಳೆದ ನಾಲ್ಕು ದಿನಗಳಿಂದ ಪೆಟ್ರೋಲ್ ದರ ಇಳಿಕೆಯಾಗುತ್ತಿದೆ. ಮೊನ್ನೆ 10 ಪೈಸೆ ಇಳಿದಿದ್ದ ಲೀಟರ್ ಪೆಟ್ರೋಲ್ ಬೆಲೆ ನಿನ್ನೆ 25 ಪೈಸೆ ಇಳಿದು ದಾಖಲೆ ನಿರ್ಮಿಸಿದೆ. 

ಹೀಗಾಗಿ ಗ್ರಾಹಕರನ್ನು ಸೆಳೆಯುವ ನಿಟ್ಟಿನಿಂದ ಪೆಟ್ರೋಲ್ ದರ ಒಂದು ಪೈಸೆಯಷ್ಟು ಇಳಿದರೂ ಅದನ್ನು ದೊಡ್ಡದಾಗಿ ತೋರಿಸುವ ಡಿಜಿಟಲ್ ಫಲಕವನ್ನು ಅಳವಡಿಸಲಾಗುತ್ತಿದೆ. 

ಪೆಟ್ರೋಲ್ ಬಂಕ್‌ಗೆ ಬಂದೊಡನೆ ಜನರು ಪೆಟ್ರೋಲ್ ದರ ಇಷ್ಟೊಂದು ಇಳಿದಿದೆಯೇ ಎಂದು ಮೂಗಿನ ಮೇಲೆ ಬೆರಳಿಡುತ್ತಿದ್ದಾರೆ. ಒಂದು ವೇಳೆ ಪೆಟ್ರೋಲ್ ದರ ಒಂದು ರು. ಇಳಿದರೆ ೧ ರು.ನ ಆರು ಅಡಿ ಕಟೌಟ್ ಅನ್ನು ರಸ್ತೆ ಪಕ್ಕ ಹಾಕಲು ಪೆಟ್ರೋಲ್ ಬಂಕ್ ಮಾಲೀಕರ ಸಂಘ ನಿರ್ಧರಿಸಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

Follow Us:
Download App:
  • android
  • ios