Asianet Suvarna News Asianet Suvarna News

ಎಚ್.ಡಿ. ರೇವಣ್ಣಗಿಂತ ಮೊದಲೇ ಡಿಕೆಶಿಗೆ ಒಲಿದ ಭಾಗ್ಯ

ಮಹಾನ್ ದೈವಭಕ್ತರಾದ ಎಚ್.ಡಿ. ರೇವಣ್ಣಗಿಂತ ಮೊದಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರಿಗೆ ಹೊಸ ಭಾಗ್ಯವೊಂದು ಒಲಿದಿದೆ. 

Faking News About HD Revanna And DK Shivakumar
Author
Bengaluru, First Published Oct 3, 2018, 3:54 PM IST
  • Facebook
  • Twitter
  • Whatsapp

ಬೆಂಗಳೂರು :  ಮಹಾನ್ ದೈವಭಕ್ತರಾದ ಎಚ್.ಡಿ. ರೇವಣ್ಣಗಿಂತ ಮೊದಲೇ ಇಂಧನ ಸಚಿವ ಡಿ.ಕೆ.ಶಿವಕುಮಾರ್ ಅವರ ಮುಂದೆ ದೇವರು  ಪ್ರತ್ಯಕ್ಷನಾಗಿ ವರ ದಯಪಾಲಿಸಿದ್ದಾನೆ. 

ಕಳೆದ ಒಂದು ವರ್ಷದಲ್ಲಿ ಡಿಕೆಶಿ ರಾಜ್ಯದ ಎಲ್ಲಾ ದೇವಾಲಯಗಳಿಗೂ ಮೂರು ಭಾರಿ ಭೇಟಿ ನೀಡಿದ್ದಾರೆ. ಆದರೆ, ರೇವಣ್ಣ ಅವರು ಹಾಸನ ದೇವಾಲಯಗಳನ್ನು ಬಿಟ್ಟು ಬೇರೆ ಕಡೆ ಇರುವ ದೇವಾಲಯಗಳಿಗೆ ಅಷ್ಟಾಗಿ ಭೇಟಿ ನೀಡಿಲ್ಲ. 

ಹೀಗಾಗಿ ಇವರಿಬ್ಬರಲ್ಲಿ ಡಿಕೆಶಿಯ ಭಕ್ತಿಗೆ ಮೆಚ್ಚಿ ದೇವರು ಪ್ರತ್ಯಕ್ಷನಾಗಿ ಯಾವ ವರಬೇಕು ಎಂದು ಕೇಳಿದ್ದಾನೆ. ತಕ್ಷಣವೇ ಡಿಕೆಶಿ ದೇವರಲ್ಲಿ ತನಗೆ  ಐಟಿ ದಾಳಿಯಿಂದ ಮೊದಲು ಮುಕ್ತಿ ನೀಡಿದರೆ ಸಾಕು. ಸಿಎಂ ಹುದ್ದೆಯನ್ನು ನಾನೇ ಪಡೆದುಕೊಳ್ಳುತ್ತೇನೆ ಎಂದು ಹೇಳಿದ್ದು, ದೇವರು ತಥಾಸ್ತು ಎಂದು ವಾಪಸ್ಸಾಗಿದ್ದಾನೆ ಎಂದು ಸುಳ್ ಸುದ್ದಿ ಮೂಲಗಳು ತಿಳಿಸಿವೆ. 

Follow Us:
Download App:
  • android
  • ios