ನವದೆಹಲಿ (ಫೆ.13): ರೂ. 2000 ಮುಖಬೆಲೆಯ ಪಾಕಿಸ್ತಾನ ಮೂಲದ ಖೋಟಾನೋಟು ಸ್ಮಗ್ಲರ್ ಮೂಲಕ ಭಾರತ-ಬಾಂಗ್ಲಾ ಗಡಿ ದಾಟಿ ಅಕ್ರಮವಾಗಿ ಭಾರತಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ನವದೆಹಲಿ (ಫೆ.13): ರೂ. 2000 ಮುಖಬೆಲೆಯ ಪಾಕಿಸ್ತಾನ ಮೂಲದ ಖೋಟಾನೋಟು ಸ್ಮಗ್ಲರ್ ಮೂಲಕ ಭಾರತ-ಬಾಂಗ್ಲಾ ಗಡಿ ದಾಟಿ ಅಕ್ರಮವಾಗಿ ಭಾರತಕ್ಕೆ ಬಂದಿದೆ ಎಂದು ಮೂಲಗಳು ತಿಳಿಸಿರುವುದಾಗಿ ಇಂಡಿಯನ್ ಎಕ್ಸ್ ಪ್ರೆಸ್ ವರದಿ ಮಾಡಿದೆ.

ಇತ್ತೀಚಿಗೆ ಎನ್ ಐಎ ಹಾಗೂ ಬಿಎಸ್ ಎಫ್ ಅಧಿಕಾರಿಗಳು ಮುರ್ಷಿದಾಬಾದ್ ನಲ್ಲಿ ಅಜಿಜೂರ್ ರೆಹಮಾನ್ ಎನ್ನುವವನ ಮೇಲೆ ದಾಳಿ ನಡೆಸಿದಾಗ ಈ ವಿಚಾರ ಬೆಳಕಿಗೆ ಬಂದಿದೆ. ಆತ 2 ಸಾವಿರ ರೂ. ಮುಖಬೆಲೆಯ 40 ಖೋಟಾ ನೋಟುಗಳನ್ನು ಕೊಂಡೊಯ್ಯಿತ್ತಿದ್ದ ಎನ್ನಲಾಗಿದೆ. ದಾಳಿಯಲ್ಲಿ

ಸಿಕ್ಕ ನೋಟು ಖೋಟಾನೋಟಾಗಿದ್ದು ಪಾಕಿಸ್ತಾನದಲ್ಲಿ ಮುದ್ರಣವಾಗಿದೆ ಎಂದು ತನಿಖಾ ತಂಡ ಹೇಳಿದೆ. ಆಂತರಿಕ ಸೇವಾದಳದ (ಐಎಸ್ಐ) ಸಹಾಯದಿಂದ ಸ್ಮಗ್ಲರ್ ಗಳು ಬಾಂಗ್ಲಾ ದೇಶದ ಮೂಲಕ ಭಾರತ ಗಡಿ ಪ್ರವೇಶಿಸಿದ್ದಾರೆ ಎಂದು ತನಿಖಾಧಿಕಾರಿಗಳು ಹೇಳಿದ್ದಾರೆ.