ಒಂಟಿಯಾಗಿ ಬರುವವರಿಗೆ ಆವರಣದೊಳಗೆ ಪ್ರವೇಶವಿಲ್ಲ. ಕನಿಷ್ಠ ಪಕ್ಷ ಬಾಯ್ ಫ್ರೆಂಡ್ ಜೊತೆಗಿನ ಫೋಟೊವನ್ನಾದರೂ ತೋರಿಸ ಬೇಕೆಂದು ಪ್ರನ್ಸಿಪಾಲ್ ಹೆಸರಿನಲ್ಲಿ ನೊಟೀಸ್ ನೀಡಿದ್ದಾರೆ. ಈ ನಕಲಿ ನೊಟೀಸ್ ಫೇಸ್ ಬುಕ್, ವಾಟ್ಸಪ್`ಗಳಲ್ಲಿ ಹರಿದಾಡಿದ್ದು, ಇದರ ವಿರುದ್ದ ಆರ್.ವಿ. ಕಾಲೇಜ್ ಪ್ರಿನ್ಸಿಪಾಲ್ ಪೊಲೀಸರಿಗೆ ದೂರು ನೀಡಿದ್ದಾರೆ.

ಬೆಂಗಳೂರು(ಜ.13): ಬೆಂಗಳೂರಿನ ಪ್ರತಿಷ್ಠಿತ ಆರ್ ವಿ ಕಾಲೇಜ್`ನಲ್ಲಿ ಪ್ರಿನ್ಸಿಪಾಲ್ ಹೆಸರಿನಲ್ಲಿ ಪುಂಡ ವಿದ್ಯಾರ್ಥಿಗಳು ಸುಳ್ಳು ನೋಟಿಸ್ ಹೊರಡಿಸಿರುವ ಘಟನೆ ನಡೆದಿದೆ. ಫೆಬ್ರವರಿ 14ಕ್ಕೆ ಮೊದಲು ಎಲ್ಲ ವಿದ್ಯಾರ್ಥಿನಿಯರೂ ಕನಿಷ್ಠ ಒಬ್ಬ ಬಾಯ್ ​ಫ್ರೆಂಡ್`ನನ್ನಾದರೂ ಹೊಂದಿರಬೇಕು. ಈ ನಿಯಮ ಕಡ್ಡಾಯವಾಗಿದ್ದು. ರಕ್ಷಣೆ ದೃಷ್ಟಿಯಿಂದ ಈ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ಸುಳ್ಳು ನೋಟಿಸ್ ಹೊರಡಿಸಲಾಗಿದೆ.