ಬಂಧಿತನನ್ನ ಬುಹ್ರೌದ್ದಿನ್ ವೊರಾ ಎಂದು ಗುರ್ತಿಸಲಾಗಿದ್ದು, 50 ಸಾವಿರದಷ್ಟು ಹಳೆಯ ಐನೂರು ರೂಪಾಯಿ ನಕಲಿ ನೋಟುಗಳನ್ನ ವಶಪಡಿಸಿಕೊಳ್ಳಲಾಗಿದೆ. ಪಾಕಿಸ್ತಾನದ ಪಾಸ್ ಪೋರ್ಟ್ ಅನ್ನೂ ವಶಕ್ಕೆ ಪಡೆಯಲಾಗಿದೆ. ಅಮೃತಸರದಿಂದ ಬಂದಿರುವುದಾಗಿ ಬಂಧಿತನು ಹೇಳಿದ್ದಾನೆಂದು ತಿಳಿದುಬಂದಿದೆ.

ಸೂರತ್(ಡಿ.14): ನೆರೆಯ ಪಾಕಿಸ್ತಾನ ಭಾರತದ ಅರ್ಥ ವ್ಯವಸ್ಥೆ ಕೆಡಿಸಲು ನಕಲಿ ನೋಟುಗಳನ್ನ ಹರಿಬಿಡುತ್ತಿದ್ದ ವಿಷಯಕ್ಕೆ ಮತ್ತೊಂದು ಸಾಕ್ಷ್ಯ ಸಿಕ್ಕಿದೆ. ಕಂತೆ ಕಂತೆ 500 ರೂಪಾಯಿಯ ನಕಲಿ ನೋಟುಗಳನ್ನ ಹೊಂದಿದ್ದ ಪಾಕಿಸ್ತಾನ ಪ್ರಜೆಯನ್ನ ಸೂರತ್`ನಲ್ಲಿ ಬಂಧಿಸಲಾಗಿದೆ.