ಕಂತೆ ಕಂತೆ ನೋಟುಗಳನ್ನ ಮುದ್ರಿಸಿ ಚಲಾವಣೆ ಯೋಜನೆ ರೂಪಿಸುತ್ತಿದ್ದ ಸಂದರ್ಭ ಖಚಿತ ಮಾಹಿತಿ ಮೇರೆಗೆ ದಾಳಿ ನಡೆಸಿದ ಪೊಲೀಸರ ತಂಡ ನಕಲಿ ನೋಟುಗಳನ್ನ ವಶಪಡಿಸಿಕೊಂಡಿದೆ. 2000 ನೋಟಿನ ಜೊತೆ 100, 50, 20 ಮತ್ತು 10 ರೂಪಾಯಿಯ ನಕಲಿ ನೋಟುಗಳೂ ಸಿಕ್ಕಿವೆ.

ಹೈದ್ರಾಬಾದ್(ನ.26): ಹೊಸ ನೋಟುಗಳು ಚಲಾವಣೆಗೆ ಬರುತ್ತಿದ್ದಂತೆ ಅವುಗಳನ್ನೂ ನಕಲು ಮಾಡುವ ದಂಧೆಕೋರರ ಹಾವಳಿ ಶುರುವಾಗಿದೆ. ಹೈದ್ರಾಬಾದ್`ನಲ್ಲಿ 2000 ರೂ ನೋಟು ಸೇರಿದಂತೆ ಭಾರತದ ಹಲವು ಕರೆನ್ಸಿಯ ನಕಲಿ ನೋಟುಗಳನ್ನ ಮುದ್ರಿಸುತ್ತಿದ್ದ 6 ಮಂದಿಯನ್ನ ಪೊಲೀಸರು ಬಂಧಿಸಿದ್ದಾರೆ.

ಇಬ್ರಾಹಿಂಪಟ್ಟಣದಲ್ಲಿ ದಾಳಿ ನಡೆಸಿದ ಪೊಲೀಸ್ ವಿಶೇಷ ತಂಡ, ಹೊಸ 2000 ರೂಪಾಯಿ ನೋಟು ಸೇರಿ ಹಲವು ಕರೆನ್ಸಿಗಳನ್ನೊಳಗೊಂಡ 2.22,310 ರೂ,ನಷ್ಟು ನಕಲಿ ನೋಟು ವಶಪಡಿಸಿಕೊಂಡಿದ್ದಾರೆ ಎಂದು ಪೊಲೀಸ್ ಕಮೀಷನರ್ ಮಹೇಶ್ ಭಗವತಿ ತಿಳಿಸಿದ್ದಾರೆ.

ಜಮಲಾಪುರ್ ಸಾಯಿನಾಥ್, ಜಿ. ಅಂಜಯ್ಯ, ಎಸ್. ರಮೇಶ್, ಸಿ. ಸತ್ಯನಾರಾಯಣ, ಕೆ. ಶ್ರೀಧರ್ ಗೌಡ, ಎ. ವಿಜಯ್ ಕುಮಾರ್ ಬಂಧಿತರು. ಕಲ್ಯಾಣ್ ಮತ್ತು ಶ್ರೀಕಾಂತ್ ಎಂಬುವವರು ತಪ್ಪಿಸಿಕೊಮಡಿದ್ದು, ಅವರ ಬಂಧನಕ್ಕೂ ಪೊಲೀಸರು ಬಲೆ ಬೀಸಿದ್ದಾರೆ.