‘‘ಸಿರಿಯಾ ವಿಚಾರದಲ್ಲಿ ಪಾಕ್ ಯಾವುದೇ ಪಾತ್ರ ನಿರ್ವಹಿಸಿದಲ್ಲಿ, ಪರಮಾಣು ಪ್ರತಿದಾಳಿ ಮಾಡುವುದಾಗಿ ಹೇಳಿರುವ ಇಸ್ರೇಲ್ ರಕ್ಷಣಾ ಸಚಿವರು ಪಾಕಿಸ್ತಾನ ಸಹ ಪರಮಾಣು ರಾಷ್ಟ್ರ ಎಂಬುದನ್ನು ಮರೆತಿದ್ದಾರೆ’’

ನ್ಯೂಯಾರ್ಕ್(ಡಿ.25): ಇಸ್ರೇಲ್ ರಾಷ್ಟ್ರದ ವಿರುದ್ಧ ಪರಮಾಣು ದಾಳಿ ಮಾಡುವುದಾಗಿ ಪಾಕಿಸ್ತಾನ ರಕ್ಷಣಾ ಸಚಿವರು ಬೆದರಿಕೆಯೊಡ್ಡಿದ್ದಾರೆ.

ಸಿರಿಯಾದ ಉಗ್ರ ಸಂಘಟನೆ ಐಎಸ್ ವಿಚಾರಕ್ಕೆ ಸಂಬಂಧಿಸಿ ಪಾಕಿಸ್ತಾನ ಸೇನೆ ಕಾರ್ಯಪ್ರವೃತ್ತವಾದರೆ, ಪಾಕ್ ಅನ್ನು ಧ್ವಂಸಗೊಳಿಸುವುದಾಗಿ ಇಸ್ರೇಲ್ ಎಚ್ಚರಿಕೆ ನೀಡಿದೆ ಎಂಬ ವದಂತಿ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡಿತ್ತು.

ಇದು ಸತ್ಯವೇ ಅಥವಾ ವದಂತಿಯೇ ಎಂಬುದನ್ನು ಖಚಿತಪಡಿಸಿಕೊಳ್ಳದ ಪಾಕ್ ರಕ್ಷಣಾ ಸಚಿವ ಖವಾಜಾ ಮೊಹಮ್ಮದ್ ಆಸೀಫ್, ‘‘ಸಿರಿಯಾ ವಿಚಾರದಲ್ಲಿ ಪಾಕ್ ಯಾವುದೇ ಪಾತ್ರ ನಿರ್ವಹಿಸಿದಲ್ಲಿ, ಪರಮಾಣು ಪ್ರತಿದಾಳಿ ಮಾಡುವುದಾಗಿ ಹೇಳಿರುವ ಇಸ್ರೇಲ್ ರಕ್ಷಣಾ ಸಚಿವರು ಪಾಕಿಸ್ತಾನ ಸಹ ಪರಮಾಣು ರಾಷ್ಟ್ರ ಎಂಬುದನ್ನು ಮರೆತಿದ್ದಾರೆ,’’ ಎಂದು ಟ್ವೀಟ್ ಮಾಡಿದ್ದಾರೆ.