ಈಗಾಗಲೇ ಇಮ್ರಾನ್ ಖಾನ್ ಅವರು ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾರೆ. ಅದರಂತೆ, ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸುವ ದಿನದಂದೇ ಇಸ್ಲಾಮಾಬಾದ್‌ನಲ್ಲಿ ಭಾರತ-ಪಾಕ್ ಫ್ರೆಂಡ್ಲಿ ಮ್ಯಾಚ್ ನಡೆಯಲಿದೆ. ಅಂದು ಮೋದಿ ಹಾಗೂ ಇಮ್ರಾನ್ ಅಕ್ಕ ಪಕ್ಕ ಕುಳಿತು ಪಂದ್ಯ ವೀಕ್ಷಿಸಲಿದ್ದಾರೆ.
ಕರಾಚಿ[ಆ.02]: ಇಸ್ಲಾಮಾಬಾದ್ ಭಾರತ ಹಾಗೂ ಪಾಕಿಸ್ತಾನದ ನಡುವೆ ಪರಸ್ಪರರ ದೇಶಗಳಲ್ಲಿ ನಿಷೇಧಗೊಂಡಿರುವ ಕ್ರಿಕೆಟ್ ಪಂದ್ಯಗಳು ಮಾಜಿ ಕ್ರಿಕೆಟಿಗ ಇಮ್ರಾನ್ ಖಾನ್ ಪಾಕಿಸ್ತಾನಕ್ಕೆ ಪ್ರಧಾನಿಯಾದ ನಂತರ ಪುನಾರಂಭಗೊಳ್ಳಲಿವೆ.
ಈ ಕುರಿತು ಈಗಾಗಲೇ ಇಮ್ರಾನ್ ಖಾನ್ ಅವರು ಪ್ರಧಾನಿ ಮೋದಿ ಜೊತೆ ಮಾತನಾಡಿದ್ದಾರೆ. ಅದರಂತೆ, ಇಮ್ರಾನ್ ಖಾನ್ ಪ್ರಮಾಣ ವಚನ ಸ್ವೀಕರಿಸುವ ದಿನದಂದೇ ಇಸ್ಲಾಮಾಬಾದ್‌ನಲ್ಲಿ ಭಾರತ-ಪಾಕ್ ಫ್ರೆಂಡ್ಲಿ ಮ್ಯಾಚ್ ನಡೆಯಲಿದೆ. ಅಂದು ಮೋದಿ ಹಾಗೂ ಇಮ್ರಾನ್ ಅಕ್ಕ ಪಕ್ಕ ಕುಳಿತು ಪಂದ್ಯ ವೀಕ್ಷಿಸಲಿದ್ದಾರೆ. ನಂತರ ಪಾಕ್ ತಂಡ ಭಾರತಕ್ಕೆ ಬಂದು ಆಡಲಿದೆ ಎಂದು ಸುಳ್‌ಸುದ್ದಿ ಮೂಲಗಳು ಹೇಳಿವೆ.
ಪಾಕಿಸ್ತಾನದ ಉಗ್ರರು ಭಾರತದಲ್ಲಿ ಭಯೋತ್ಪಾದನೆ ನಡೆಸುತ್ತಿರುವ ಹಿನ್ನೆಲೆಯಲ್ಲಿ ಕೆಲ ವರ್ಷಗಳಿಂದ 2 ದೇಶಗಳ ನಡುವೆ ಕ್ರಿಕೆಟ್ ನಿಷೇಧಗೊಂಡಿತ್ತು.
