ಜೆಡಿಎಸ್‌- ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಹಲವಾರು ದಿನಗಳಾಗಿದ್ದರೂ ಸಚಿವ ಸಂಪುಟ ರಚನೆಯಾಗದ ಹಿನ್ನೆಲೆಯಲ್ಲಿ, ವಿಧಾನಸೌಧದ ಸಚಿವರ ಕಚೇರಿ ಮುಂದೆ ‘ಇಂದಲ್ಲ ನಾಳೆ ಬಾ’ ಬೋರ್ಡ್‌ ಹಾಕಲಾಗಿದೆ.

ಬೆಂಗಳೂರು (ಜೂ. 01):  ಜೆಡಿಎಸ್‌- ಕಾಂಗ್ರೆಸ್‌ ಸರ್ಕಾರ ರಚನೆಯಾಗಿ ಹಲವಾರು ದಿನಗಳಾಗಿದ್ದರೂ ಸಚಿವ ಸಂಪುಟ ರಚನೆಯಾಗದ ಹಿನ್ನೆಲೆಯಲ್ಲಿ, ವಿಧಾನಸೌಧದ ಸಚಿವರ ಕಚೇರಿ ಮುಂದೆ ‘ಇಂದಲ್ಲ ನಾಳೆ ಬಾ’ ಬೋರ್ಡ್‌ ಹಾಕಲಾಗಿದೆ.

ಇದನ್ನು ನೋಡಿದ ಜನರು ಸಮಾಧಾನ ಪಟ್ಟುಕೊಂಡು ಹಿಂದಿರುಗುತ್ತಿದ್ದಾರೆ. ಸಂಪುಟ ರಚನೆ ಬಳಿಕ ಜ್ಯೋತಿಷಿಗಳ ಸಲಹೆ ಪಡೆದು ಒಳ್ಳೆಯ ಮುಹೂರ್ತದಲ್ಲಿ ನೂತನ ಸಚಿವರು ತಮ್ಮ ಕಚೇರಿಗೆ ಆಗಮಿಸಲು ಇನ್ನೂ ಒಂದು ತಿಂಗಳು ಬೇಕಾಗಲಿದೆ. ಇನ್ನು ಜನರ ಕೆಲಸ ಮಾಡಿಕೊಡಬೇಕಾದರೆ ವರ್ಷಗಳೇ ಬೇಕಾಗಲಿವೆ. ಹೀಗಾಗಿ ಕಚೇರಿಗಳ ಮುಂದೆ ಈ ಬೋರ್ಡ್‌ ತಗೆಯದಂತೆ ಸಿಬ್ಬಂದಿಗೆ ಸರ್ಕಾರದಿಂದಲೇ ಸೂಚನೆ ನೀಡಲಾಗಿದೆ. ಸರ್ಕಾರಿ ಕಚೇರಿಗಳಿಗೂ ಇದೇ ಬೋರ್ಡ್‌ ಅಳವಡಿಸುವ ಕಾರ್ಯ ನಡೆಯುತ್ತಿದೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.