ಬೆಂಗಳೂರು (ಜ.26): ಕೆಲ ವರ್ಷಗಳ ಹಿಂದಷ್ಟೇ ಹಿಸೆಯಾಗಿರುವ ಆಂಧ್ರಪ್ರದೇಶ ಮತ್ತು ತೆಲಂಗಾಣದ ನಡುವೆ ಇದೀಗ ಬಿಕ್ಕಟ್ಟೊಂದು ಎದುರಾಗಿದೆ. ತೆಲಂಗಾಣದ ಮಹಿಳೆಯರು ಆಂಧ್ರ ಪ್ರದೇಶಕ್ಕೆ ಸಾಮೂಹಿಕವಾಗಿ ವಲಸೆ ಹೋಗಲು ಆರಂಭಿಸಿದ್ದು, ಅವರನ್ನು ಏನು ಮಾಡಬೇಕು ಎಂದು ಉಭಯ ರಾಜ್ಯಗಳು ಗೊಂದಲಕ್ಕೆ ಬಿದ್ದಿವೆ.

ಈ ದಿಢೀರ್ ವಲಸೆಗೆ ಕಾರಣ ಆಂಧ್ರದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರು ಮಹಿಳೆಯರಿಗೆ 10 ಸಾವಿರ ರು. ನಗದು ಹಾಗೂ ಒಂದು ಸ್ಮಾರ್ಟ್‌ಫೋನ್ ನೀಡುವ ಯೋಜನೆ ಪ್ರಕಟಿಸಿರುವುದು. ಇದನ್ನು ಕೇಳಿದ ತೆಲಂಗಾಣದ ಮಹಿಳೆಯರು ತಾತ್ಕಾಲಿಕವಾಗಿ ಗಂಟುಮೂಟೆ ಕಟ್ಟಿಕೊಂಡು ಆಂಧ್ರಪ್ರದೇಶದ ಬೇರೆ ಬೇರೆ ಹಳ್ಳಿಗಳಿಗೆ ಹೋಗಿ ನೆಂಟರಿಷ್ಟರ ಮನೆಯಲ್ಲಿ ಆಶ್ರಯ ಪಡೆಯುತ್ತಿದ್ದಾರೆ. ಹಣ
ಹಾಗೂ ಮೊಬೈಲ್ ಸಿಕ್ಕಮೇಲೆ ತೆಲಂಗಾಣಕ್ಕೆ ವಾಪಸ್ ಹೋಗುತ್ತೇವೆಂದು ಅವರು ಸುಳ್‌ಸುದ್ದಿ ಸಂಸ್ಥೆಗೆ ತಿಳಿಸಿದ್ದಾರೆ.