ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ಮತ್ತೆ ವಿವಾಹವಾಗುತ್ತಿರುವ ಬಗ್ಗೆ ಇದೀಗ ಎಲ್ಲೆಡೆ ಸುದ್ದಿಯೊಂದು ಹರಡಿದ್ದು, ಆದರೆ ಇದು ಸುಳ್ಳು ಎಂದು ಕೊನೆಗೆ ತಿಳಿದು ಬಂದಿದೆ. 

ನವದೆಹಲಿ: ಕಾಂಗ್ರೆಸ್‌ ಸಂಸದ ಶಶಿತರೂರ್‌ ಮೂರನೇ ಮದುವೆಗೆ ಸಿದ್ಧರಾಗಿದ್ದಾರೆ. ಶೀಘ್ರವೇ ಅವರು ಪಾಕಿಸ್ತಾನ ಮೂಲದ ಪತ್ರಕರ್ತೆ ಮೆಹರ್ ತರಾರ್‌ ಅವರನ್ನು ವರಿಸಲಿದ್ದಾರೆ ಎಂದು ಹಬ್ಬಿಸಲಾದದ ಸುಳ್ಳು ಸುದ್ದಿಯೊಂದು ಭಾನುವಾರ ಭಾರೀ ಪ್ರಚಾರ ಗಿಟ್ಟಿಸಿಕೊಂಡಿತು. 

ಸಿಎನ್‌ಎನ್‌ನ್ಯೂಸ್‌ 18 ಹೆಸರಲ್ಲಿ ಇಂಥದ್ದೊಂದು ಸುದ್ದಿ ಹರಿದಾಡುತ್ತಲೇ ಭಾರೀ ಪ್ರಮಾಣದಲ್ಲಿ ಟ್ವೀಟಿಗರು ಇದಕ್ಕೆ ಪ್ರತಿಕ್ರಿಯೆ ನೀಡತೊಡಗಿದರು. 

ಈ ವೇಳೆ ಸ್ವತಃ ಮಧ್ಯಪ್ರವೇಶ ಮಾಡಿದ ತರಾರ್‌, ಇದೊಂದು ಸುಳ್ಳು ಸುದ್ದಿ. ಕೇವಲ 66 ಜನ ಹಿಂಬಾಲಕರನ್ನು ಹೊಂದಿರುವ ಖಾತೆಯಿಂದ ರವಾನೆಯಾದ ಇಂಥ ಸುದ್ದಿಯನ್ನೂ ಜನ ಪರಿಶೀಲಿಸದೆ ಹೇಗೆ ನಂಬತ್ತಾರೋ ಗೊತ್ತಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.