ನವದೆಹಲಿ (ಜು. 24): ಪ್ರಧಾನಿಯಾಗಿ ಅತಿ ಹೆಚ್ಚು ದೇಶಗಳನ್ನು ಸುತ್ತಿದ ಹೆಗ್ಗಳಿಕೆ ಗಳಿಸಿರುವ ಮೋದಿ, 5 ವರ್ಷದ ಅವಧಿ ಮುಗಿಯುವುದರೊಳಗಾಗಿ ವಿಶ್ವದ ಎಲ್ಲಾ ದೇಶಗಳಿಗೆ ಭೇಟಿ ನೀಡುವ ಗುರಿ ಹೊಂದಿದ್ದಾರೆ. ಈ ಹಿನ್ನೆಲೆಯಲ್ಲಿ ಮೋದಿ ಅವರು ಇದುವೆರೆಗೆ ಯಾವ ಯಾವ ದೇಶಗಳಿಗೆ ಭೇಟಿ ನೀಡಿದ್ದಾರೆ, ಇನ್ನೂ ಯಾವ ದೇಶಗಳು ಬಾಕಿ ಉಳಿದಿವೆ ಎಂಬ ವರದಿಯನ್ನು ಶೀಘ್ರವೇ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಲಾಗಿದೆ.

ಲೋಕಸಭೆ  ಚುನಾವಣೆ ಸಮೀಪಿಸುತ್ತಿರುವುದರಿಂದ ಇನ್ನು 6 ತಿಂಗಳ ಒಳಗಾಗಿ ವಿದೇಶ ಪ್ರವಾಸವನ್ನು ಸಮಾಪ್ತಿಗೊಳಿಸುವ ಸುಳಿವನ್ನು ಮೋದಿ ನೀಡಿದ್ದಾರೆ. ಇದೇ ವೇಳೆ ಈ ವರ್ಷ ಅತಿ ಕಡಿಮೆ ವಿದೇಶಿ ಭೇಟಿಯನ್ನು ನಿಗದಿಪಡಿಸಿದ್ದಕ್ಕಾಗಿ ಅಧಿಕಾರಿಯೊಬ್ಬರನ್ನು ವರ್ಗಾವಣೆ ಮಾಡಲಾಗಿದೆ ಎಂದು ಸುಳ್‌ಸುದ್ದಿ  ಮೂಲಗಳು ತಿಳಿಸಿವೆ.