ಮಂಡ್ಯ (ಮಾ. 26): ನಿಖಿಲ್‌ ಕುಮಾರಸ್ವಾಮಿ ನಾಮಪತ್ರ ಸಲ್ಲಿಕೆಗೆ ಲಕ್ಷಾಂತರ ಮಂದಿ ಆಗಮಿಸಿದ್ದನ್ನು ಕಂಡು ಅಮೆರಿಕದ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಬೆರಗಾಗಿದ್ದಾರೆ.

ತಮ್ಮ ಪ್ರಮಾಣವಚನ ಸ್ವೀಕಾರ ಸಮಾರಂಭಕ್ಕೆ ಒಬಾಮಾ ಅವರ ಪ್ರಮಾಣವಚನ ಸಮಾರಂಭಕ್ಕೆ ಬಂದಿದ್ದಕ್ಕಿಂತ ಹೆಚ್ಚು ಜನರನ್ನು ಕರೆತರಲು ಟ್ರಂಪ್‌ ವಿಫಲರಾಗಿದ್ದರು. ಹೀಗಾಗಿ ಎರಡನೇ ಬಾರಿಗೆ ಅಧ್ಯಕ್ಷರಾಗಿ ತಾವು ಆಯ್ಕೆಯಾದರೆ ಮಂಡ್ಯಕ್ಕೆ ಬಂದು ಲಕ್ಷಾಂತರ ಜನರ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಲು ಟ್ರಂಪ್‌ ನಿರ್ಧರಿಸಿದ್ದಾರೆ.

ಒಂದು ವೇಳೆ ಮಂಡ್ಯಕ್ಕೆ ಬರಲು ಸಾಧ್ಯವಾಗದೇ ಇದ್ದರೆ, ಕನಿಷ್ಠ 15 ಲಕ್ಷ ಜನರನ್ನಾದರೂ ಸೇರಿಸಲು ಕುಮಾರಸ್ವಾಮಿ ಅವರ ನೆರವು ಕೇಳಲಿದ್ದಾರೆ. ಅಮೆರಿಕಕ್ಕೆ ಜನರನ್ನು ಕರೆತರಲು ವಿಮಾನ ಮತ್ತು ವಸತಿ ವ್ಯವಸ್ಥೆ  ಕಲ್ಪಿಸಿಕೊಡುವುದಾಗಿಯೂ ಹೇಳಿದ್ದಾರೆ ಎಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.

- ಸುಳ್‌ಸುದ್ಧಿ