ಡಿಕೆಶಿ ಈ ತಾಯತ ಕಟ್ಟಿಕೊಂಡ್ರೆ ಐಟಿ ದಾಳಿಯಿಂದ ತಪ್ಪಿಸ್ಕೋಬಹುದಂತೆ!

First Published 3, Jun 2018, 11:31 AM IST
Fake News about D K Shivkumar
Highlights

ಇಂಧನ ಖಾತೆ ಬಿಟ್ಟುಕೊಟ್ಟ ಡಿ.ಕೆ. ಶಿವಕುಮಾರ್‌ಗೆ ಎಚ್.ಡಿ.ರೇವಣ್ಣ ವಿಶೇಷ ತಾಯತವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಖ್ಯಾತ ಜ್ಯೋತಿಷಿಯೊಬ್ಬರು  ಸಿದ್ಧಪಡಿಸಿರುವ ಈ ತಾಯತ ಐಟಿ ಹಾಗೂ ಸಿಬಿಐ ದಾಳಿಯಿಂದ ರಕ್ಷಣೆ ನೀಡಲಿದೆ. 

ಬೆಂಗಳೂರು (ಜೂ. 03):  ಇಂಧನ ಖಾತೆ ಬಿಟ್ಟುಕೊಟ್ಟ ಡಿ.ಕೆ. ಶಿವಕುಮಾರ್‌ಗೆ ಎಚ್.ಡಿ.ರೇವಣ್ಣ ವಿಶೇಷ ತಾಯತವೊಂದನ್ನು ಉಡುಗೊರೆಯಾಗಿ ನೀಡಿದ್ದಾರೆ. ಖ್ಯಾತ ಜ್ಯೋತಿಷಿಯೊಬ್ಬರು  ಸಿದ್ಧಪಡಿಸಿರುವ ಈ ತಾಯತ ಐಟಿ ಹಾಗೂ ಸಿಬಿಐ ದಾಳಿಯಿಂದ ರಕ್ಷಣೆ ನೀಡಲಿದೆ.

ತಾಯತ ಧರಿಸಿಕೊಂಡರೆ ಸಿಬಿಐ ದಾಳಿಯ ಬಗ್ಗೆ ಮುನ್ಸೂಚನೆ ರವಾನಿಸಲಿದೆ. ಐಟಿ ಅಧಿಕಾರಿಗಳು ಕರ್ನಾಟಕಕ್ಕೆ ಕಾಲಿಡುತ್ತಿದ್ದಂತೆ ತಾಯತ ಕಂಪಿಸಲು ಆರಂಭವಾಗಲಿದೆ. ತಾಯತವನ್ನು ಕೈಯಲ್ಲಿ ಹಿಡಿದುಕೊಂಡರೆ ಐಟಿ ಅಧಿಕಾರಿಗಳು ಎಷ್ಟು ಗಂಟೆಗೆ ಬರಲಿದ್ದಾರೆ? ಯಾವ ಕಡೆಗಳಲ್ಲಿ ದಾಳಿ ಮಾಡಲಿದ್ದಾರೆ? ಯಾವ್ಯಾವ ಬ್ಯಾಂಕ್ ಖಾತೆಯ ವಿವರ ಕೇಳಲಿದ್ದಾರೆ? ಅದಕ್ಕೆ ಹೇಗೆ ಉತ್ತರಿಸಬೇಕು ಎನ್ನುವ ಸುಳಿವು ದೊರೆಯಲಿದೆ. ತಾಯತ ಕೈಯಲ್ಲಿ ಇರುವ ತನಕವೂ ಡಿಕೆಶಿಗೆ ಯಾವುದೇ ತೊಂದರೆ ಇಲ್ಲ ಎಂದು ಸುಳ್ ಸುದ್ದಿ  ಮೂಲಗಳು ತಿಳಿಸಿವೆ. 

loader