ಬೆಂಗಳೂರು (ಜೂ. 26): ನಟ ರಮೇಶ್ ಅರವಿಂದ್ ನಡೆಸಿಕೊಡುವ ಕನ್ನಡದ  ಕೋಟ್ಯಧಿಪತಿ ಕಾರ್ಯಕ್ರದಲ್ಲಿ ಮೊದಲ ಸುತ್ತಿಗೆ ಆಯ್ಕೆಯಾದವರಿಗೆ ಕಠಿಣ ಪ್ರಶ್ನೆಯೊಂದು ಎದುರಾಗಿದೆ.

ಕರ್ನಾಟಕದಲ್ಲಿ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರ ಎಷ್ಟು ದಿನ ಅಧಿಕಾರದಲ್ಲಿ ಇರಲಿದೆ ಎಂಬ ಪ್ರಶ್ನೆಯನ್ನು ಕೇಳಲಾಗಿದೆ. ಇದಕ್ಕೆ 100 ದಿನ, 200 ದಿನ, 400 ದಿನ, 500 ದಿನ ಎಂಬ ನಾಲ್ಕು ಆಯ್ಕೆಗಳನ್ನು ನೀಡಲಾಗಿದೆ. ಈ ಪ್ರಶ್ನೆಗೆ ಉತ್ತರ ಹೇಳಿದರೆ ಮಾತ್ರ ಕೋಟಿ ರು. ಸಿಗಲಿದೆ. ಆದರೆ, ಈ ಮೇಲಿನ ಯಾವುದೇ ಆಯ್ಕೆಯನ್ನು ಹೇಳಿದರೂ ತಪ್ಪು ಉತ್ತರ ಆಗುವುದರಿಂದ ಅಭ್ಯರ್ಥಿಗಳು ಗೊಂದಲಕ್ಕೆ ಸಿಲುಕಿದ್ದಾರೆ.

ಇನ್ನು ಕೆಲವರು ಹೆಲ್ಪ್‌ಲೈನ್ ಬಳಸಿ ಕುಮಾರಸ್ವಾಮಿಗೇ ಫೋನ್ ಮಾಡಿದ್ದು, ಅವರೂ ಸಹ ಉತ್ತರ ಹೇಳಲು ಸಾಧ್ಯವಾಗಿಲ್ಲ ಎಂದಿದ್ದಾರೆಂದು ಸುಳ್‌ಸುದ್ದಿ ಮೂಲಗಳು ತಿಳಿಸಿವೆ.