ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದು, ‘ಈ ಖಾತೆಯನ್ನು ಫಾಲೋ ಮಾಡಬೇಡಿ’ ಎಂದು ಯದುವೀರ್ ಅವರು ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

ಮೈಸೂರು: ಮೈಸೂರು ರಾಜವಂಶಸ್ಥ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಅವರ ಪತ್ನಿ ತ್ರಿಷಿಕಾ ಕುಮಾರಿ ಸಿಂಗ್ ಅವರ ಹೆಸರಿನಲ್ಲಿ ನಕಲಿ ಇನ್‌ಸ್ಟಾಗ್ರಾಂ ಖಾತೆ ತೆರೆದಿದ್ದು, ‘ಈ ಖಾತೆಯನ್ನು ಫಾಲೋ ಮಾಡಬೇಡಿ’ ಎಂದು ಯದುವೀರ್ ಅವರು ತಮ್ಮ ಖಾತೆಯಲ್ಲಿ ಪೋಸ್ಟ್ ಹಾಕಿದ್ದಾರೆ.

ಈ ಹಿಂದೆಯೂ ತ್ರಿಷಿಕಾಕುಮಾರಿ ಅವರ ಹೆಸರಿನಲ್ಲಿ ನಕಲಿ ಖಾತೆ ಸೃಷ್ಟಿಸಲಾಗಿತ್ತು. ಅದಕ್ಕೂ ಯದುವೀರ್ ಅವರು ಆಕ್ಷೇಪಣೆ ವ್ಯಕ್ತಪಡಿಸಿದ್ದರು.

ಈಗ ಮತ್ತೆ ತ್ರಿಷಿಕಾ ಅವರ ಹೆಸರಿನಲ್ಲಿ ‘ತ್ರಿಷಿಕಾಕುಮಾರಿ ಒಡೆಯರ್’ ಎಂಬ ನಕಲಿ ಖಾತೆ ತೆರೆಯಲಾಗಿದೆ.

ಇದನ್ನು ಗಮನಿಸಿರುವ ಯದುವೀರ್ ಅವರು, ನಕಲಿ ಖಾತೆಯ ಫೋಟೋವನ್ನು ತಮ್ಮ ಇನ್‌ಸ್ಟಾಗ್ರಾಂ ಸ್ಟೇಟಸ್‌ಗೆ ಹಾಕಿ, ಅದರ ಮೇಲೆ ‘ಇದೊಂದು ನಕಲಿ ಖಾತೆ, ಯಾರೂ ಫಾಲೋ ಮಾಡಬೇಡಿ’ ಎಂದು ಬರೆದಿದ್ದಾರೆ