ರಮೇಶ್ ಚಾಂದ್ ಎಂಬ ಉದ್ಯಮಿಯ ಮನೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಕಾರಿನಲ್ಲಿ ಬಂದ 6 ಮಂದಿ ಮನೆಮಂದಿಯ ಮೊಬೈಲ್'ಅನ್ನು ಕಸಿದುಕೊಂಡು ನೀವು 20 ಕೋಟಿಗೂ ಹೆಚ್ಚು ತೆರಿಗೆ ಪಾವತಿಸಿಲ್ಲ ಎಂದು ಮನೆಯನ್ನು ಶೋಧಿಸಲು ಆರಂಭಿಸಿದೆ.
ಚಂಡೀಘಡ(ಸೆ.18): ಇತ್ತೀಚಿನ ದಿನಗಳಲ್ಲಿ ದೇಶಾದ್ಯಂತ ತೆರಿಗೆ ವಂಚಕರ ಮೇಲೆ ಆದಾಯ ತೆರಿಗೆ ಇಲಾಖೆಯ ದಾಳಿಗಳು ಹೆಚ್ಚಾಗುತ್ತಿವೆ. ಆದರೆ ಇದನ್ನೇ ದುರುಪಯೋಗಪಡಿಸಿಕೊಂಡ ಕೆಲವು ಮೋಸಗಾರರು ನಕಲಿ ಅಧಿಕಾರಿಗಳ ವೇಷದಲ್ಲಿ ಸೋಗು ಹಾಕಿಕೊಂಡು ದಾಳಿಯಿಡುವ ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ಇದೇ ರೀತಿಯ ಪ್ರಕರಣ ಹರ್ಯಾಣದ ಮಾಳವೀಯ ನಗರದಲ್ಲಿ ಭಾನುವಾರ ನಡೆದಿದೆ. ಆದರೆ ಗ್ರಹಚಾರ ಕೆಟ್ಟಿತ್ತು ಏನೋ ವಂಚಿಸುವ ಬದಲು ಮನೆಯವರ ಕೈಗೆ ಸಿಕ್ಕಿ ಹಣ್ಣುಗಾಯಿ ನೀರುಗಾಯಿಯಾಗಿದ್ದಾರೆ. ರಮೇಶ್ ಚಾಂದ್ ಎಂಬ ಉದ್ಯಮಿಯ ಮನೆಗೆ ಐಟಿ ಅಧಿಕಾರಿಗಳ ಸೋಗಿನಲ್ಲಿ ಸಫಾರಿ ಕಾರಿನಲ್ಲಿ ಬಂದ 6 ಮಂದಿ ಮನೆಮಂದಿಯ ಮೊಬೈಲ್'ಅನ್ನು ಕಸಿದುಕೊಂಡು ನೀವು 20 ಕೋಟಿಗೂ ಹೆಚ್ಚು ತೆರಿಗೆ ಪಾವತಿಸಿಲ್ಲ ಎಂದು ಮನೆಯನ್ನು ಶೋಧಿಸಲು ಆರಂಭಿಸಿದೆ.
ಆದರೆ ಉದ್ಯಮಿಯ ಪುತ್ರಿಗೆ ಇವರ ನಡೆಯ ಬಗ್ಗೆ ಅನುಮಾನ ಬಂದು ಗುರುತಿನ ಚೀಟಿಗಳನ್ನು ಕೇಳಿದ್ದಾಳೆ. ಅವು ನಕಲಿಯಾಗಿದ್ದವು. ಕೋಪಗೊಂಡ ಮನೆಯಮಂದಿ ನಕಲಿ ಅಧಿಕಾರಿಗಳಿಗೆ ಹಿಗ್ಗಾಮಗ್ಗಾ ಬಾರಿಸಿದ್ದಾರೆ. ಪಾಪ ವಿಡಿಯೋದಲ್ಲಿ ಒದೆ ತಿನ್ನುವ ಇವರ ನರಳಾಟ ನೋಡಲಾಗುತ್ತಿರಲಿಲ್ಲ. ಸ್ಥಳೀಯ ಪೊಲೀಸರು ಆಗಮಿಸಿ ಬಂಧಿಸಿದ್ದಾರೆ.
