Asianet Suvarna News Asianet Suvarna News

ಬೆತ್ತಲೆ ಪೂಜೆ ಮಾಡೋ ಧನಂಜಯ್ ದಿಢೀರ್ ನಾಪತ್ತೆ: ವರದಿಗಾರರ ಮೇಲೆ ಹಲ್ಲೆಗೆ ಮುಂದಾದ ಸಹಚರರು

ಡೋಂಗಿ ಬಾಬಾನ ಕರಾಳ ದಂಧೆಯ ಇನ್ನೊಂದು ಮುಖವನ್ನ ಸುವರ್ಣ ನ್ಯೂಸ್​​ ಜನರಿಗೆ ಪರಿಚಯ ಮಾಡಿತ್ತು. ಬಾಬಾನ ಅಸಲಿ ಮುಖ ಗೊತ್ತಾಗುತ್ತಿದ್ದಂತೆ ಇದೀಗ ಸಾಲು ಸಾಲು ಜನರು ಬಾಬನ ವಿರುದ್ಧ ಪೊಲೀಸ್​​ ಠಾಣೆಯ ಮೆಟ್ಟಿಲಿರಿದ್ದಾರೆ. ಧನಂಜಯ ಸ್ವಾಮಿ ಊರಿಗೆ ತೆರಳಿದ್ದ ಸುವರ್ಣ ನ್ಯೂಸ್​​ ತಂಡ ನಕಲಿ ಸ್ವಾಮಿಯ ಇನ್ನಷ್ಟು ಕರ್ಮಕಾಂಡಗಳನ್ನ ಬಯಲು ಮಾಡಿದೆ.

Fake Godman Is Missing

ಬೆಂಗಳೂರು(ಮೇ.27): ಡೋಂಗಿ ಬಾಬಾನ ಕರಾಳ ದಂಧೆಯ ಇನ್ನೊಂದು ಮುಖವನ್ನ ಸುವರ್ಣ ನ್ಯೂಸ್​​ ಜನರಿಗೆ ಪರಿಚಯ ಮಾಡಿತ್ತು. ಬಾಬಾನ ಅಸಲಿ ಮುಖ ಗೊತ್ತಾಗುತ್ತಿದ್ದಂತೆ ಇದೀಗ ಸಾಲು ಸಾಲು ಜನರು ಬಾಬನ ವಿರುದ್ಧ ಪೊಲೀಸ್​​ ಠಾಣೆಯ ಮೆಟ್ಟಿಲಿರಿದ್ದಾರೆ. ಧನಂಜಯ ಸ್ವಾಮಿ ಊರಿಗೆ ತೆರಳಿದ್ದ ಸುವರ್ಣ ನ್ಯೂಸ್​​ ತಂಡ ನಕಲಿ ಸ್ವಾಮಿಯ ಇನ್ನಷ್ಟು ಕರ್ಮಕಾಂಡಗಳನ್ನ ಬಯಲು ಮಾಡಿದೆ.

ಸುವರ್ಣ ನ್ಯೂಸ್​​ ರಹಸ್ಯ ಕಾರ್ಯಚರಣೆ ಮೂಲಕ ಡೋಂಗಿ ಬಾಬನ ಅಸಲಿ ಮುಖವನ್ನು ಎಳೆ ಎಳೆಯಾಗಿ ಪರಿಚಯ ಮಾಡುವ ಮೂಲಕ ಬಾಬನ ಕರಾಳ  ದಂಧೆಯ ಮುಖವನ್ನು  ಜನರಿಗೆ ಪರಿಚಯ ಮಾಡಿತ್ತು. ಬಾಬನ ಮೋಸದಾಟವನ್ನು ತಿಳಿಯಲು ನಿನ್ನೆ ಸುವರ್ಣ ನ್ಯೂಸ್​​ ಟಿಂ ಡೊಂಗಿ ಬಾಬನ ಊರು ಬಿದನಕೆರೆಗೆ ಪ್ರಯಾಣ ಬೆಳೆಸಿತ್ತು. ಊರಿಗೆ ಪ್ರವೇಶಿಸುತ್ತಿದ್ದಂತೆಯೇ ಸುವರ್ಣ ನ್ಯೂಸ್​ ಟಿಂ ಮೇಲೆ ಬಾಬಾ ಚೇಲಾಗಳು ಹಲ್ಲೆಗೆ  ಮುಂದಾಗಿದ್ದರು.

ಊರಿನಲ್ಲಿ ಚಿತ್ರಿಕರಣ ಮಾಡದಂತೆ ಸುವರ್ಣ ನ್ಯೂಸ್​​ ವರದಿಗಾರನಿಗೆ ಡೋಂಗಿ ಬಾಬನ ಚೇಲಾಗಳು ಧಮ್ಕಿ ಹಾಕೋ ಮೂಲಕ ಹಲ್ಲೆಗೆ ಕೂಡ  ಮುಂದಾಗಿದ್ರು. ಬಾಬಾನ ದಾಂಡಿಗರು ವರದಿಗಾರನ ಮೇಲೆ  ಹಲ್ಲೆಗೆ ಮುಂದಾಗುತ್ತಿದ್ದಂತೆ ಕುಣಿಗಲ್​ ಪೊಲೀಸರು ಎಂಟ್ರಿ  ಕೋಟ್ಟು ಬಾಬನ ಚೇಲಾಗಳನ್ನ ತಣ್ಣಾಗಾಗಿಸಿದ್ದರು. ಈ ಮಧ್ಯೆ ಬಾಬ ವಿರುದ್ಧ ಅದೇ ಊರಿನ ನಾರಾಯಣ್​​ ಎಂಬುವರು ಕುಣಿಗಲ್​​ ಪೊಲೀಸ್​ ಠಾಣೆಯಲ್ಲಿ ದೂರು  ದಾಖಲಿಸಿದ್ದಾರೆ.

ಐಪಿಸಿ ಸೆಕ್ಷನ್​​ 341, 504, 506 ಅಡಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಈಗಾಗಲೇ ಡೋಂಗಿ ಬಾಬನಿಗೆ ನೋಟಿಸ್​​ ನೀಡಿ ವಿಚಾರಣೆ ನಡೆಸುವ ಸಾಧ್ಯತೆಯಿದೆ. ಇನ್ನು  ಸುವರ್ಣ ನ್ಯೂಸ್​​ ಸ್ಟೋಡಿಯೋದಲ್ಲಿ ಮೋಸಹೋದವರಿಗೆ ಹಣ ವಾಪಸ್ಸು ಮಾಡುತ್ತೇನೆ ಎಂದಿದ್ದ ಭೂಪ ಧನಂಜಯ್ಯ ಆಲಿಯಾಸ್​ ಡೋಂಗಿ ಬಾಬ ನಿನ್ನೆ ನಾಪತ್ತೆಯಾಗಿದ್ದಾನೆ.

ಒಟ್ಟಿನಲ್ಲಿ ಸದ್ಯದಲ್ಲೇ  ಬಾಬನ ಇನ್ನಷ್ಟು  ಕರ್ಮಕಾಂಡಗಳು ಹೊರಬರಲಿವೆ. ಇನ್ನು ಪೊಲೀಸ್​​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಬಾಬನ ವಿರುದ್ದ ಪೊಲೀಸರು ಯಾವ ರೀತಿ ಕ್ರಮ ಕೈಗೊಳ್ತಾರೋ ಎನ್ನುವುದನ್ನು ಕಾದು ನೋಡಬೇಕು.

Follow Us:
Download App:
  • android
  • ios