ಇಲ್ಲೊಬ್ಬ ವೈದ್ಯನಿದ್ದಾನೆ, ಆದರೆ ಈತ  ಮನುಷ್ಯ ರೂಪದ ಯಮಧರ್ಮರಾಯ.  ಹುಷಾರ್  ಇಲ್ಲಾ  ಎಂದು ಈತನ ಬಳಿ ಹೋದರೆ ಮಾತ್ರ ನೇರವಾಗಿ ಯಮನ ಪಾದ ಸೇರಿಸಿಬಿಡುತ್ತಾನೇ!

ಚಿಕ್ಕಬಳ್ಳಾಪುರ: ಇಲ್ಲೊಬ್ಬ ವೈದ್ಯನಿದ್ದಾನೆ, ಆದರೆ ಈತ ಮನುಷ್ಯ ರೂಪದ ಯಮಧರ್ಮರಾಯ. ಹುಷಾರ್ ಇಲ್ಲಾ ಎಂದು ಈತನ ಬಳಿ ಹೋದರೆ ಮಾತ್ರ ನೇರವಾಗಿ ಯಮನ ಪಾದ ಸೇರಿಸಿಬಿಡುತ್ತಾನೇ!

ಈತನ ಹೆಸರು ರಮಣ, ಚಿಕ್ಕಬಳ್ಳಾಪುರ ಜಿಲ್ಲೆ ಬಾಗೇಪಲ್ಲಿ ತಾಲೂಕಿನ ಯಲ್ಲಂಪಲ್ಲಿ ಗ್ರಾಮದಲ್ಲಿ ಒಂದು ಚಿಕ್ಕ ಕ್ಲಿನಿಕ್ ನಡೆಸುತ್ತಿದ್ದಾನೆ. ನಿಮಗೆ ಕೆಮ್ಮು, ನೆಗಡಿ , ಜ್ವರ , ಏನೇ ಖಾಯಿಲೇ ಬಂದರೂ ಇವನು ಕೋಡೋದು ಮಾತ್ರ ಒಂದೇ ಇಂಜೆಕ್ಷನ್.

ಅದು ಸ್ಟಿರಾಯ್ಡ್, ಅಥವಾ ಪೇಯ್ನ್ ಕಿಲ್ಲರ್ ಮಾತ್ರ. ಮತ್ತೊಂದು ಭಯಾನಕ ವಿಷಯ ಏನಂದರೆ, ಈತ ಒಂದೇ ಸಿರಿಂಜ್'ನಲ್ಲಿ 10ಕ್ಕೂ ಹೆಚ್ಚು ಮಂದಿಗೆ ಇಂಜೆಕ್ಷನ್ ಕೊಡ್ತಾನೆ. ಈತನ ವಿರುದ್ಧ ಆರೋಪ ಕೇಳಿಬಂದ ಹಿನ್ನೆಲೆ, ಸತ್ಯಾಸತ್ಯತೆ ಬಯಲು ಮಾಡಲು ನಿಂತ ಸುವರ್ಣ ನ್ಯೂಸ್ ಗೆ ತಿಳಿದುಬಂದಿದ್ದು, ಈತ ಅಸಲಿ ಅಲ್ಲ, ನಕಲಿ ವೈದ್ಯನೆಂದು.

ಹೌದು, ಈ ವೈದ್ಯ ಸುಮಾರು ವರ್ಷಗಳಿಂದ ಇಲ್ಲಿ ಕ್ಲಿನಿಕ್ ಇಟ್ಟುಕೊಂಡಿದ್ದು, ಅದ್ಯಾವ ಧೈರ್ಯದ ಮೇಲೆ ಈತನ ಬಳಿ ರೋಗಿಗಳು ಹೋಗುತ್ತಾರೋ ಗೊತ್ತಿಲ್ಲ, ಇನ್ನು ಈತನಿಗೆ ಮೆಡಿಕಲ್ ಸ್ಟೋರ್'ನವರೆ ಔಷಧಿ ಸಪ್ಲೈ ಮಾಡ್ತಾರೆ.

ಸುವರ್ಣ ನ್ಯೂಸ್ ಈ ವೈದ್ಯನ ಕರಾಮತ್ತು ತಿಳಿಯಲು ಮುಂದಾದಾಗ ಭಯಾನಕ ವಿಷಯ ಹೊರಬಿತ್ತು. ಅದೇನಂದರೆ ಒಂದು ಇಂಜೆಕ್ಷನ್ ಸಿರೀಂಜ್'ನಲ್ಲೇ ಹಲವರಿಗೆ ಇಂಜೆಕ್ಷನ್ ನೀಡ್ತಾನೆ. ಏನ್ ಸಾರ್ ಹೀಗೆ ಹಳೆಯದಾದ ಒಂದೇ ಸಿರಿಂಜ್ ನಲ್ಲಿ ಇಂಜೆಕ್ಷನ್ ಕೊಡ್ತೀರಾ ಅಂತ ಕೇಳಿದ್ರೆ, ಏನು ಆಗಲ್ಲಾ ಬಿಡಿ ನಾನು ಟ್ರೀಟ್ಮೆಂಟ್ ಕೋಡೊದೇ ಹೀಗೆ ಅಂತಾನೇ ಈ ಭೂಪ! ಸದ್ಯಕ್ಕೆ ಈತನನ್ನು ಬಂಧಿಸಲಾ

ಆಂಧ್ರದ ಗಡಿಭಾಗದಲ್ಲಿರುವ ಬಾಗೇಪಲ್ಲಿ ತಾಲೂಕಿನಲ್ಲಿ ಬಹುತೇಖ ನಕಲಿ ವೈದ್ಯರು ಆಂಧ್ರದವರೇ ಆಗಿದ್ದಾರೆ. ಈ ಬಗ್ಗೆ ಆರೋಗ್ಯ ಇಲಾಖೆಯ ಅಧಿಕಾರಿಗಳು ಮಾತ್ರ ಕಣ್ಮುಚ್ಚಿ ಕುಳಿತಿದ್ದಾರೆ. ಒಟ್ಟಾರೆ, ಗ್ರಾಮೀಣ ಬಾಗದ ಜನರ ಜೀವದ ಜೊತೆ ಆಟವಾಡುವ ಇಂತಹ ನಕಲಿ ವೈದ್ಯರ ಹಾವಳಿ ರಾಜ್ಯದಲ್ಲಿ ಎಗ್ಗಿಲ್ಲದೇ ನಡೆಯುತ್ತಿದೆ. ವೈದ್ಯರಂತೆ ಬಿಂಬಿಸಿಕೊಂಡು ಚಿಕಿತ್ಸೆ ನೀಡುತ್ತಿರುವ ಈ ನಕಲಿಗಳಿಗೆ ಕಡಿವಾಣ ಹಾಕಬೇಕಿದೆ.

ವರದಿ: ರವಿಕುಮಾರ್ ವಿ