ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟಲು 2016ರ ನವೆಂಬರ್ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ತೀರ್ಮಾನವನ್ನು ಘೋಷಿಸಿದ್ದರು. ಇದಾಗಿ ಕೇವಲ 53 ದಿನಗಳ ಒಳಗೆ  ನೂತನ 500 ಹಾಗೂ 2000 ಮುಖಬೆಲೆಯ ನಕಲಿ ನೋಟುಗಳು ಹೊರ ಬಂದಿದ್ದವು.

ನವದೆಹಲಿ(ಡಿ.8): 500 ಮತ್ತು 1000 ಮುಖಬೆಲೆಯ ನೋಟುಗಳು ನಿಷೇಧಗೊಂಡ 53 ದಿನಗಳ ಒಳಗೆ ಹೊಸದಾಗಿ ಬಂದಿದ್ದ 2000 ಮುಖಬೆಲೆಯ ನಕಲಿ ನೋಟುಗಳು ಚಲಾವಣೆಯಾಗಿದ್ದವು ಎಂದು ರಾಷ್ಟ್ರೀಯ ಅಪರಾಧ ದಾಖಲಾತಿ ಘಟಕ ಮಾಹಿತಿಯನ್ನು ಬಹಿರಂಗ ಮಾಡಿದೆ.

ನಕಲಿ ನೋಟುಗಳ ಹಾವಳಿಯನ್ನು ತಡೆಗಟ್ಟಲು 2016ರ ನವೆಂಬರ್ 8 ರಂದು ರಾತ್ರಿ 8 ಗಂಟೆ ಸುಮಾರಿಗೆ ಪ್ರಧಾನಿ ನರೇಂದ್ರ ಮೋದಿ ಅವರು ನೋಟು ನಿಷೇಧ ತೀರ್ಮಾನವನ್ನು ಘೋಷಿಸಿದ್ದರು. ಇದಾಗಿ ಕೇವಲ 53 ದಿನಗಳ ಒಳಗೆ ನೂತನ 500 ಹಾಗೂ 2000 ಮುಖಬೆಲೆಯ ನಕಲಿ ನೋಟುಗಳು ಹೊರ ಬಂದಿದ್ದವು. ಪೊಲೀಸರು ಮೊದಲಿಗೆ ಸಾವಿರಾರು ನೋಟುಗಳನ್ನು ವಶಪಡಿಸಿಕೊಂಡಿದ್ದರು ಎಂದು ಎನ್’ಸಿಆರ್’ಬಿ ಹೇಳಿದೆ.

ಮತ್ತೊಂದು ಆಶ್ಚರ್ಯಕರ ವಿಚಾರವೆಂದರೆ ಗುಜರಾತ್’ನಲ್ಲಿಯೇ ಅತ್ಯಧಿಕ ಪ್ರಮಾಣದಲ್ಲಿ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು. ಉಳಿದಂತೆ ಪಂಜಾಬ್, ಕರ್ನಾಟಕ, ತೆಲಂಗಾಣ, ಮಹಾರಾಷ್ಟ್ರ, ಮಧ್ಯ ಪ್ರದೇಶ, ರಾಜಸ್ಥಾನ, ಆಂಧ್ರ, ಹರಿಯಾಣದಲ್ಲಿ ಹಾಗೂ ಜಮ್ಮು ಕಾಶ್ಮೀರ, ಕೇರಳದಲ್ಲಿಯೂ ಕೂಡ ನಕಲಿ ನೋಟುಗಳನ್ನು ವಶಕ್ಕೆ ಪಡೆದುಕೊಳ್ಳಲಾಗಿತ್ತು ಎಂದು ಮಾಹಿತಿ ನೀಡಿದೆ.