ನ್ಯಾಯಾಧೀಶರು ವಸ್ತುನಿಷ್ಠರಾಗಿರಬೇಕು, ಯಾವುದೇ ಸಂದರ್ಭದಲ್ಲಿ ಪ್ರಕರಣದ ಸತ್ಯಾಂಶ ಆಧರಿಸಿಯೇ ತೀರ್ಪು ನೀಡಬೇಕೆಂಬ ನಿರೀಕ್ಷೆಯಿರುತ್ತದೆ. ಆದರೆ ಸುಪ್ರೀಂಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿಗಳನ್ನು ಆಧರಿಸಿದ ತಯಾರಿಸಿದ ವರದಿ ಪ್ರಕಾರ, ನ್ಯಾಯಾಧೀಶರ ಧಾರ್ಮಿಕ, ವೈಯಕ್ತಿಕ ನಂಬಿಕೆಗಳೂ ತೀರ್ಪುಗಳ ಮೇಲೆ ಪರಿಣಾಮ ಬೀರುತ್ತವೆ. ಗಲ್ಲು, ಜೀವಾವಧಿ ಶಿಕ್ಷೆಗಳ ತೀರ್ಪು ನೀಡುವ ಸಂದರ್ಭಗಳಲ್ಲೂ ಇಂತಹ ಪ್ರಭಾವ ವಿರುತ್ತದೆ ಎಂದು ಹೇಳಲಾಗಿದೆ.
ನವದೆಹಲಿ: ನ್ಯಾಯಾಧೀಶರು ವಸ್ತುನಿಷ್ಠರಾಗಿರಬೇಕು, ಯಾವುದೇ ಸಂದರ್ಭದಲ್ಲಿ ಪ್ರಕರಣದ ಸತ್ಯಾಂಶ ಆಧರಿಸಿಯೇ ತೀರ್ಪು ನೀಡಬೇಕೆಂಬ ನಿರೀಕ್ಷೆಯಿರುತ್ತದೆ. ಆದರೆ ಸುಪ್ರೀಂಕೋರ್ಟ್ನ ನಿವೃತ್ತ ನ್ಯಾಯಮೂರ್ತಿಗಳನ್ನು ಆಧರಿಸಿದ ತಯಾರಿಸಿದ ವರದಿ ಪ್ರಕಾರ, ನ್ಯಾಯಾಧೀಶರ ಧಾರ್ಮಿಕ, ವೈಯಕ್ತಿಕ ನಂಬಿಕೆಗಳೂ ತೀರ್ಪುಗಳ ಮೇಲೆ ಪರಿಣಾಮ ಬೀರುತ್ತವೆ. ಗಲ್ಲು, ಜೀವಾವಧಿ ಶಿಕ್ಷೆಗಳ ತೀರ್ಪು ನೀಡುವ ಸಂದರ್ಭಗಳಲ್ಲೂ ಇಂತಹ ಪ್ರಭಾವ ವಿರುತ್ತದೆ ಎಂದು ಹೇಳಲಾಗಿದೆ.
ದೆಹಲಿಯ ರಾಷ್ಟ್ರೀಯ ಕಾನೂನು ವಿವಿಯ ಮರಣ ದಂಡನೆಯ ಕೇಂದ್ರದ ವತಿಯಿಂದ ಸಿದ್ಧಪಡಿಸಲಾದ ‘ತೀರ್ಪಿನ ವಿಷಯಗಳು’ ಸಮೀಕ್ಷೆಯಲ್ಲಿ ಈ ಅಂಶಗಳು ಪತ್ತೆಯಾಗಿವೆ.
ಮರಣ ದಂಡನೆ ಮತ್ತು ಜೀವಾವಧಿ ಶಿಕ್ಷೆಗಳ ನಡುವೆ ಯಾವ ಶಿಕ್ಷೆ ನೀಡಬೇಕೆಂಬ ಆಯ್ಕೆಯ ಪ್ರಶ್ನೆ ಬಂದಾಗ ಮತ್ತು ಮರಣ ದಂಡನೆ ವಿಧಿಸುವಾಗ ಪರಿಗಣಿಸಲಾದ ವಿವಿಧ ಆಧಾರಗಳನ್ನು ಗಮನಿಸಿದಾಗ ನ್ಯಾಯಮೂರ್ತಿಗಳ ಧರ್ಮ ಸೇರಿದಂತೆ, ಹಿನ್ನೆಲೆಯೂ ಪ್ರಭಾವ ಬೀರುತ್ತದೆ ಎಂಬುದು ಸಮೀಕ್ಷೆಯಿಂದ ತಿಳಿದು ಬರುತ್ತದೆ.
ಸುಮಾರು 60 ನಿವೃತ್ತ ನ್ಯಾಯಮೂರ್ತಿಗಳನ್ನು ಸಮೀಕ್ಷೆಗೆ ಒಳಪಡಿಸಲಾಗಿತ್ತು.
