Asianet Suvarna News Asianet Suvarna News

ಕೋತಿ ಹಿಡಿಯಲು ಪಾಲಿಕೆ ಪಾಠ: ಕೋತಿಗಳದ್ದು ಮಾತ್ರ ಅದೇ ಹಠ!

ತಡೆಯಲಾಗುತ್ತಿಲ್ಲ ಕೋತಿಗಳ ಕಾಟ! ಕೋತಿ ಹಿಡಿಯಲು ಸಿಬ್ಬಂದಿಗೆ ಪಾಲಿಕೆ ಪಾಠ! ನವದೆಹಲಿಯಲ್ಲಿ ತಲೆನೋವಾದ ಕೋತಿಗಳು! ಸಿಬ್ಬಂದಿಗೆ ತರಬೇತಿ ನೀಡಲು ಮುಂದಾದ ಮಹಾನಗರ ಪಾಲಿಕೆ

Failing to find monkey catchers, SDMC will get its staff trained
Author
Bengaluru, First Published Aug 29, 2018, 11:41 AM IST

ನವದೆಹಲಿ(ಆ.29): ರಾಷ್ಟ್ರ ರಾಜಧಾನಿ ನವದೆಹಲಿಗೆ ಇದೀಗ ಹೊಸ ತಲೆನೋವೊಂದು ಶುರುವಾಗಿದೆ. ನಗರದಲ್ಲಿ ಕೋತಿಗಳ ಕಾಟ ಜಾಸ್ತಿಯಾಗಿದ್ದು, ಜನಸಾಮಾನ್ಯರಷ್ಟೇ ಅಲ್ಲ ಮಹಾನಗರ ಪಾಲಿಕೆ ಕೂಡ ತಲೆ ಮೇಲೆ ಕೈಹೊತ್ತು ಕುಳಿತಿದೆ.

ಕೋತಿಗಳ ಕಾಟದಿಂದ ಮುಕ್ತಿ ಪಡೆಯಲು ಪಾಲಿಕೆ ಹೊಸ ಪ್ಲ್ಯಾನ್ ಮಾಡಿದ್ದು, ಅದರಂತೆ ತನ್ನ ಸಿಬ್ಬಂದಿಗೆ ಕೋತಿ ಹಿಡಿಯುವ ತರಬೇತಿ ಕೊಡಲು ಮುಂದಾಗಿದೆ. 

ಪಾಲಿಕೆಯ 10 ಸಿಬ್ಬಂದಿಗೆ ವನ್ಯಮೃಗ ಸಂರಕ್ಷಣಾ ಘಟಕದಲ್ಲಿ ಕೋತಿಗಳನ್ನು ಹಿಡಿಯುವ ಬಗೆ ಕುರಿತು ತರಬೇತಿ ನೀಡಲಾಗುವುದು ಎಂದು ದೆಹಲಿ ಮಹಾನಗರ ಪಾಲಿಕೆ ತಿಳಿಸಿದೆ.

ಈ ಹಿಂದೆ ಕೋತಿಗಳನ್ನು ಹಿಡಿಯಲು ಖಾಸಗಿ ವ್ಯಕ್ತಿಗಳನ್ನು ನೇಮಿಸಿದ್ದ ಪಾಲಿಕೆ, ಒಂದು ಕೋತಿ ಹಿಡಿದು ಕೊಟ್ಟರೆ 2,400 ರೂ. ಕೊಡುತ್ತಿತ್ತು. ಆದರೆ ಇತ್ತೀಚೆಗೆ ಈ ಕಾರ್ಯಕ್ಕೆ ಜನ ಬರುತ್ತಿಲ್ಲವಾದ್ದರಿಂದ ತನ್ನ ಸಿಬ್ಬಂದಿಗೇ ಇದರ ತರಬೇತಿ ಕೊಡಿಸಲು ಮುಂದಾಗಿದೆ.

Follow Us:
Download App:
  • android
  • ios