ಮುಂಬೈ ಮಹಾನಗರಪಾಲಿಕೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಸಾಕಷ್ಟು ಕೆಸರೆರಚಾಟ ನಡೆಸಿಕೊಂಡಿವೆ.

ಮುಂಬೈ (ಫೆ.21): ಮಹಾರಾಷ್ಟ್ರದ ಬಿಜೆಪಿ ನೇತೃತ್ವದ ಸರ್ಕಾರಕ್ಕೆ ನೀಡಿರುವ ಬೆಂಬಲವು ತಾತ್ಕಾಲಿಕವಾದುದು ಮತ್ತು ಮುಖ್ಯಮಂತ್ರಿ ದೇವೇಂದ್ರ ಫಡ್ನವಿಸ್ ಅವರ ಭವಿಷ್ಯ ಅನಿಶ್ಚಿತವಾಗಿದೆ ಎಂದು ಶಿವಸೇನೆ ಹೇಳಿದೆ. 

ಮುಂಬೈ ಮಹಾನಗರಪಾಲಿಕೆ ಚುನಾವಣೆ ಪ್ರಚಾರದ ಸಂದರ್ಭದಲ್ಲಿ ಮಿತ್ರ ಪಕ್ಷಗಳಾದ ಬಿಜೆಪಿ ಮತ್ತು ಶಿವಸೇನೆ ಸಾಕಷ್ಟು ಕೆಸರೆರಚಾಟ ನಡೆಸಿಕೊಂಡಿವೆ.

ಮುಂಬೈ ಮಹಾನಗರಪಾಲಿಕೆಗೆ ಇಂದು ಮತದಾನ ನಡೆಯುತ್ತಿದೆ. ಒಂದು ದಿನ ಬಾಕಿ ಇರುವಾಗ ಫಡ್ನವೀಸ್ ಭವಿಷ್ಯದ ಬಗ್ಗೆ ಟೀಕಿಸುವ ಮೂಲಕ ಶಿವಸೇನಾ ಮುಖಂಡರು ಕಿಡಿ ಹೊತ್ತಿಸಿದ್ದಾರೆ.