ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಕೂಡಿಟ್ಟಭಾರತದ ಪ್ರಮುಖ ರಾಜಕಾರಣಿಗಳ ಹೆಸರುಗಳಿರುವ ಪಟ್ಟಿಯನ್ನು ಸ್ವತಃ ಸ್ವಿಸ್ ಬ್ಯಾಂಕ್ ಭಾರತ ಸರ್ಕಾರಕ್ಕೆ ನೀಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ನಿಜನಾ ಈ ಸುದ್ದಿ? ಏನಿದರ ಸತ್ಯಾಸತ್ಯತೆ?
ಸ್ವಿಸ್ ಬ್ಯಾಂಕ್‌ನಲ್ಲಿ ಹಣ ಕೂಡಿಟ್ಟಭಾರತದ ಪ್ರಮುಖ ರಾಜಕಾರಣಿಗಳ ಹೆಸರುಗಳಿರುವ ಪಟ್ಟಿಯನ್ನು ಸ್ವತಃ ಸ್ವಿಸ್ ಬ್ಯಾಂಕ್ ಭಾರತ ಸರ್ಕಾರಕ್ಕೆ ನೀಡಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಆ ಪತ್ರದಲ್ಲಿ ಹೀಗಿದೆ, ‘ಸ್ವಿಸ್ ಬ್ಯಾಂಕ್‌ನಲ್ಲಿ ಅತಿ ಹೆಚ್ಚು ಹಣ ಕೂಡಿಟ್ಟಭಾರತ ಮೂಲ 10 ಪ್ರಮುಖ ಖಾತೆಗಳ ಮಾಹಿತಿಯನ್ನು ಸ್ವಿಸ್ ಬ್ಯಾಂಕ್ ಕಾರ್ಪೋರೇಶನ್ ಬಹಿರಂಗಪಡಿಸುತ್ತಿದೆ. ಈ ಎಲ್ಲಾ ಭಾರತೀಯ ಖಾತೆದಾರರು ಸರಿಯಾಗಿ ತೆರಿಗೆ ಪಾವತಿಸಿದ್ದಾರೆಯೇ ಪರಿಶೀಲಿಸಿ. ಇದು 2012 ಮಾರ್ಚ್ 31ರ ಒಳಗಿನ ಸಂಪೂರ್ಣ ಮಾಹಿತಿ ಎಂದು ಹೇಳಲಾಗಿದೆ.
ಪತ್ರದ ಕೆಳಭಾಗದಲ್ಲಿ ರಾಜೀವ್ ಗಾಂಧಿ, ಹರ್ಷದ್ ಮೆಹ್ತಾ, ಶರದ್ ಪವಾರ್, ಪಿ.ಚಿದಂಬರಂ, ಸುರೇಶ್ ಕಲ್ಮಾಡಿ, ಕರುಣಾನಿಧಿ, ಚಿರಾಗ್ ಯೋಗೇಶ್ ಮೋಹಿನಿ ಮತ್ತಿತರ ಹೆಸರುಗಳಿವೆ. ಈ ಪತ್ರದಲ್ಲಿ ಸ್ವಿಡ್ಜರ್‌ಲ್ಯಾಂಡ್‌ನ ಸ್ವಿಸ್ ಬ್ಯಾಂಕ್ ಕಾರ್ಪೋರೇಶನ್‌ನ ಲೆಟರ್‌ಹೆಡ್ ಬಳಸಲಾಗಿದೆ. ಈ ಪತ್ರವನ್ನು 2011ರಲ್ಲಿ ಕಳುಹಿಸಲಾಗಿದೆ ಎಂದಿದೆ.
ಆದರೆ ಸ್ವಿಸ್ ಬ್ಯಾಂಕ್ ಕಾರ್ಪೋರೇಶನ್‌ಅನ್ನು 1997ರಲ್ಲಿಯೇ ಯೂನಿಯನ್ ಬ್ಯಾಂಕ್ ಆಫ್ ಸ್ವಿಡ್ಜರ್‌ಲ್ಯಾಂಡ್‌ನೊಂದಿಗೆ ವಿಲೀನಗೊಳಿಸಲಾಗಿದೆ. ಬೂಮ್ ಈ ಬಗ್ಗೆ ಪರಿಶೀಲಿಸಲು ಯುಬಿಎಸ್ ಬಳಿ ಸ್ಪಷ್ಟನೆ ಪಡೆದಿದ್ದು, ಅದು ಇದು ಸ್ಪಷ್ಟವಾಗಿ ನಕಲಿ ಪತ್ರ.
2011ರಲ್ಲಿ ಸ್ವಿಸ್ ಬ್ಯಾಂಕ್ ಕಾರ್ಪೋರೇಶನ್ ಅಸ್ತಿತ್ವದಲ್ಲೇ ಇರಲಿಲ್ಲ ಎಂದು ಹೇಳಿದೆ. 2011ರಿಂದಲೂ ಈ ನಕಲಿ ಪತ್ರ ಸೋಷಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ ಪತ್ರದಲ್ಲಿ ಸಾಕಷ್ಟುವ್ಯಾಕರಣ ದೋಷಗಳಿಗೆ ಖಾತೆಯಲ್ಲಿರುವ ಹಣದ ಮೊತ್ತವನ್ನು ಕೋಟಿ ರೂಪದಲ್ಲಿ ಹೇಳಲಾಗಿದೆ. ಆದರೆ ಸ್ವಿಸ್ ಬ್ಯಾಂಕ್‌ನಲ್ಲಿ ಮಲಿಯನ್, ಬಿಲಿಯನ್ ರೂಪದಲ್ಲಿ ಪ್ರಕಟವಾಗುತ್ತದೆ.
- ವೈರಲ್ ಚೆಕ್
