ಜಗತ್ತಿನ ಪ್ರಮುಖ ಮುಸ್ಲಿಂ ಪಾದ್ರಿ ಅಜೀಜ್‌ ಬಿನ್‌ ಅಬ್ದುಲ್ಲ, ಪತಿ ತೀರಾ ಹಸಿದಾಗ ಪತ್ನಿಯನ್ನು ತಿನ್ನಬಹುದು ಎಂದು ಫತ್ವಾ ಹೊರಡಿಸಿದ್ದಾರೆ ಎನ್ನಲಾದ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಕುಷಿ ಸಿಂಗ್‌ ಎಂಬುವವರು ಮೊದಲಿಗೆ ಇದನ್ನು ಟ್ವೀಟರ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ. ಅನಂತರ ರುಷಿ ವೆಕಾರಿಯಾ ಎಂಬುವವರೂ ಕೂಡ ಟ್ವಿಟ ಮಾಡಿದ್ದು, ಇದು 300 ಬಾರಿ ರೀಟ್ವೀಟ್‌ ಆಗಿದೆ. ಅನಂತರ ಇದು ಸೋಷಿಯಲ್‌ ಮೀಡಿಯಾದಲ್ಲಿ ಬೈರಲ್‌ ಆಗುತ್ತಿದೆ. ‘ವಿ ಸಪೋರ್ಟ್‌ ರಿಪಬ್ಲಿಕ್‌’ ಎನ್ನುವ ಫೇಸ್‌ಬುಕ್‌ ಪೇಜ್‌ಕೂ ಇದನ್ನು ಪೋಸ್ಟ್‌ ಮಾಡಿದೆ.

ಆದರೆ ಈ ಸುದ್ದಿಯ ಸತ್ಯಾಸತ್ಯ ಪರಿಶೀಲಿಸಿದಾಗ ಇದು 2015ರಲ್ಲಿ ಸುದ್ದಿ ಮಾಧ್ಯಮವೊಂದರಲ್ಲಿ ಪ್ರಕಟವಾಗಿದ್ದು ಎಂದು ತಿಳಿದುಬಂದಿದೆ. ಇಂಡಿಯಾ ಟುಡೇ ಸುದ್ದಿವಾಹಿನಿಯೂ ‘ಪತಿ ತೀರಾ ಹಸಿದಾಗ ಪತ್ನಿಯನ್ನು ಕೊಂದು ತಿನ್ನಬಹುದು: ಸೌದಿ ಶೇಕ್‌’ ಎಂಬ ಶೀರ್ಷಿಕೆಯಡಿ ಇದನ್ನು ವರದಿ ಮಾಡಿತ್ತು.

ಆದರೆ ಕೊನೆಯಲ್ಲಿ ಸೌದಿಯ ಶೇಕ್‌ ಈ ರೀತಿಯ ಫತ್ವಾ ಹೊರಡಿಸಿಲ್ಲ ಎಂದಿದ್ದಾರೆ ಎಂದಿದೆ. ಅಲ್ಲದೆ ಹಲವಾರು ಮಾಧ್ಯಮಗಳೂ ಇದೊಂದು ಸುಳ್ಳುಸುದ್ದಿ ಎಂದು 2017ರಲ್ಲೇ ವರದಿ ಮಾಡಿವೆ. ಹಾಗಾಗಿ ಸೌದಿ ಅರೇಬಿಯಾದ ಪ್ರಮುಖ ಪಾದ್ರಿ ತೀರಾ ಹಸಿವಾದಾಗ ಪತಿಯು ಪತ್ನಿಯನ್ನೇ ತಿನ್ನಬಹುದು ಎಂದು ಫತ್ವಾ ಹೊರಡಿಸಿಲ್ಲ ಎಂದಬುದು ಸ್ಪಷ್ಟ.

- ವೈರಲ್ ಚೆಕ್