Asianet Suvarna News Asianet Suvarna News

Fact Check: ಪಬ್‌ಜಿ ಆಟದಲ್ಲಿ ಸ್ಕೋರ್‌ ನೀಡದ್ದಕ್ಕೆ ಸ್ನೇಹಿತನನ್ನೇ ಕೊಲ್ಲಲಾಯ್ತಾ?

ಪಬ್‌ಜಿ ಆಟ ವಿಶ್ವದಾದ್ಯಂತ ಭಾರೀ ಸಂಖ್ಯೆಯಲ್ಲಿ ಆಟಗಾರರನ್ನು ಹೊಂದಿದೆ. ಗೇಮ್‌ನಲ್ಲಿ ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು ಆಟದ ಒಂದು ಭಾಗ. ಅದರಂತೆ ತನಗೆ ಪಬ್‌ಜಿ ಆನ್‌ಲೈನ್‌ ಆಟದ ವೇಳೆ 6ಎಕ್ಸ್‌ ಅಂಕ ಕೊಡಲಿಲ್ಲ ಎಂದು ಜಪಾನ್‌ನ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ ಎಂದು ಸುದ್ದಿಯಾಗಿದೆ. ಏನಿದರ ಅಸಲಿಯತ್ತು? 

Fact check of man kill his friend for PUBG in Japan?
Author
Bengaluru, First Published Jun 14, 2019, 9:13 AM IST

ಪಬ್‌ಜಿ ಆಟ ವಿಶ್ವದಾದ್ಯಂತ ಭಾರೀ ಸಂಖ್ಯೆಯಲ್ಲಿ ಆಟಗಾರರನ್ನು ಹೊಂದಿದೆ. ಗೇಮ್‌ನಲ್ಲಿ ನೀಡುವ ನಿರ್ದೇಶನದಂತೆ ನಡೆದುಕೊಳ್ಳುವುದು ಆಟದ ಒಂದು ಭಾಗ. ಇದರಂತೆ ಸ್ನೇಹಿತರನ್ನು ಪಬ್‌ಜಿ ಆಟಕ್ಕೆ ಸೆಳೆಯುವುದು, ಅಲ್ಲದೆ ಅವರಿಂದ ಸ್ಕೋರ್‌ ಪಡೆದುಕೊಳ್ಳುವುದು ಸಹ ಸೇರಿದೆ.

ಅದರಂತೆ ತನಗೆ ಪಬ್‌ಜಿ ಆನ್‌ಲೈನ್‌ ಆಟದ ವೇಳೆ 6ಎಕ್ಸ್‌ ಅಂಕ ಕೊಡಲಿಲ್ಲ ಎಂದು ಜಪಾನ್‌ನ ಯುವಕನೊಬ್ಬ ತನ್ನ ಸ್ನೇಹಿತನನ್ನೇ ಕೊಲೆ ಮಾಡಿದ್ದಾನೆ ಎಂದು ಸುದ್ದಿಯಾಗಿದೆ. ಆತನನ್ನು ಪೊಲೀಸರು ಬೇಡಿ ಹಾಕಿ ಕರೆದೊಯ್ಯುವ ಚಿತ್ರವನ್ನು ಪ್ರಕಟಿಸಿ ಪಬ್‌ಜಿ ಆಟದಲ್ಲಿ ಸ್ಕೋರ್‌ ನೀಡದ ಗೆಳೆಯನ್ನು ಈತ ಹೊಡೆದು ಕೊಂದಿದ್ದಾನೆ ಎಂದು ಸಾಮಾಜಿಕ ತಾಣದಲ್ಲಿ ಹರಿಯಬಿಡಲಾಗಿದೆ.

ಈ ಸಂಬಂಧ ಇಂಡಿಯಾ ಟುಡೇ ಕೊಂಚ ಆಳಕ್ಕಿಳಿದು ಪರಿಶೀಲಿಸಿದಾಗ ಈತ ಚೀನಾ ದೇಶದ ಪ್ರಜೆ ಎಂದು ಗೊತ್ತಾಗಿದೆ. ಚೀನಾದ ಮಿಜಿ ಪ್ರಾಂತ್ಯದಲ್ಲಿ ವಾಸವಾಗಿರುವ ಈತ ಪ್ರೌಢಶಾಲೆಯಲ್ಲಿ ಓದುತ್ತಿದ್ದಾಗ ಸಹಪಾಠಿಗಳು ಇವನನ್ನು ಬೆದರಿಸುತ್ತಿದ್ದರು. ಅವರ ಮೇಲೆ ಈತನಿಗೆ ತುಂಬಾ ಕೋಪವಿತ್ತು.

ಹಾಗಾಗಿ ದ್ವೇಷ ತೀರಿಸಿಕೊಳ್ಳಲು ಈತ ಒಂದು ದಿನ ಶಾಲೆಗೆ ಹೋದಾಗ ಅಲ್ಲಿ ಆತನಿಗೆ ತನ್ನನ್ನು ರೇಗಿಸುತ್ತಿದ್ದ ಸಹಪಾಠಿಗಳು ಸಿಕ್ಕಿಲ್ಲ. ಅದೇ ಆಕ್ರೋಶದಲ್ಲಿ ಶಾಲೆಯಿಂದ ಹೊರಬರುತ್ತಿದ್ದ ಒಂಬತ್ತು ಮಕ್ಕಳನ್ನು ಚಾಕು ಇರಿದು ಕೊಂದಿದ್ದ. ಈ ಪ್ರಕರಣದಲ್ಲಿ ಅಲ್ಲಿನ ನ್ಯಾಯಾಲಯ ಈತನಿಗೆ ಶಿಕ್ಷೆ ವಿಧಿಸಿತ್ತು.

ಈಗ ಜಪಾನ್‌ನಲ್ಲಿ ಪಬ್‌ಜಿ ಆಟದ ವೇಳೆ ಸ್ಕೋರ್‌ ನೀಡಲಿಲ್ಲ ಎಂದು ಗೆಳೆಯನನ್ನು ಕೊಂದಿದ್ದಾನೆಂದು ಹರಿದಾಡುತ್ತಿರುವುದು ಈತನದೇ ಫೋಟೋ. ಹೀಗಾಗಿ ಪಬ್‌ಜಿ ಸುದ್ದಿ ಸುಳ್ಳು ಎನ್ನುವುದು ಖಚಿತವಾಗಿದೆ.

- ವೈರಲ್ ಚೆಕ್ 

Follow Us:
Download App:
  • android
  • ios