ನವದೆಹಲಿ[ಸೆ.18]: ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆಯ ಚಂದ್ರಯಾನ-2 ಚಂದ್ರನ ದಕ್ಷಿಣ ಧ್ರುವದಲ್ಲಿ ಲ್ಯಾಂಡ್‌ ಆಗಲು ಹಿನ್ನಡೆಯಾಗಿದ್ದಕ್ಕೆ ಬಾಂಗ್ಲಾ ದೇಶದ ವ್ಯಕ್ತಿಯೊಬ್ಬರು ಸಂತೋಷಪಟ್ಟು ಬಿಸಿ ರಸಗುಲ್ಲಾ ತಿಂದು ಸಾವನ್ನಪ್ಪಿದ್ದಾರೆ ಎನ್ನುವ ಸಂದೇಶ ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

ಇಂಡಿಯಾ ಟು ಡೇ ವೆಬ್‌ಸೈಟ್‌ ಹೆಸರಿನಲ್ಲಿ ಸೆ.7ರಂದು ಇಸ್ರೋ ಕಳುಹಿಸಿದ ವಿಕ್ರಮ್‌ ಲ್ಯಾಂಡರ್‌ ಚಂದ್ರನ ದಕ್ಷಿಣ ಧ್ರುವದಲ್ಲಿದಲ್ಲಿ ಲ್ಯಾಂಡ್‌ ಆಗುವ ಕೊನೇ ಕ್ಷಣದಲ್ಲಿ ಸಂಪರ್ಕ ಕಳೆದುಕೊಂಡಿದ್ದಕ್ಕೆ ಸಂತಸಗೊಂಡ ಬಾಂಗ್ಲಾ ಪ್ರಜೆಯೊಬ್ಬರು ಸ್ನೇಹಿತರೊಟ್ಟಿಗೆ ಸಂಭ್ರಮಾಚರಿಸಲು ಹೋಗಿ ಬಿಸಿ ರಸಗುಲ್ಲಾ ಸೇವಿಸಿ ಮೃತಪಟ್ಟಿದ್ದಾರೆ ಎನ್ನಲಾಗಿದೆ. ಇದೀಗ ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗಿದೆ.

ಆದರೆ ಈ ವ್ಯಕ್ತಿ ನಿಜಕ್ಕೂ ಭಾರತಕ್ಕೆ ಹಿನ್ನಡೆಯಾಗಿದ್ದಕ್ಕೆ ಸಂಭ್ರಮಾಚರಿಸಿದ್ದರೇ ಎಂದು ಪರಿಶೀಲಿಸಿದಾಗ ಇದೊಂದು ಸುಳ್ಳುಸುದ್ದಿ ಎಂದು ತಿಳಿದುಬಂದಿದೆ. ಇಂಡಿಯಾ ಟು ಡೇ ಆ್ಯಂಟಿ ಫೇಕ್‌ ನ್ಯೂಸ್‌ ವಾರ್‌ ರೂಮ್‌ ತಂಡ ಈ ಬಗ್ಗೆ ಹುಡುಕಾಟ ನಡೆಸಿದಾಗ ಈ ಸುದ್ದಿಯು 10 ವರ್ಷ ಹಳೆಯದ್ದು ಎಂದು ತಿಳಿದುಬಂದಿದೆ. ಆದರೆ ಮುಖ್ಯವಾಹಿನಿಯ ಮಾಧ್ಯಮಗಳು ಯಾವೂ ಇದನ್ನು ವರದಿ ಮಾಡಿಲ್ಲ.

ವೈರಲ್ ಚೆಕ್, ಎಲ್ಲಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ರಿವರ್ಸ್‌ ಇಮೇಜ್‌ನಲ್ಲಿ ಪರಿಶೀಲಿಸಿದಾಗ ಇದೇ ವ್ಯಕ್ತಿಯ ಚಿತ್ರ 2010ರಲ್ಲಿ ಬ್ಲಾಗ್‌ವೊಂದರಲ್ಲಿ ಪ್ರಕಟವಾಗಿದೆ. ಅದು ವಿದೇಶಿಗರೊಬ್ಬರು ಬಾಂಗ್ಲಾದ ಬಗ್ಗೆ ಬರೆದ ಅನುಭವ ಕಥನವಾಗಿದೆ. ಆದರೆ ನಿಜಕ್ಕೂ ರಸಗುಲ್ಲಾ ಸೇವಿಸಿ ಸಾವನ್ನಪ್ಪಿದ್ದರೇ ಎಂಬ ಬಗ್ಗೆ ಸ್ಪಷ್ಟಮಾಹಿತಿ ಲಭಿಸಿಲ್ಲ. ಆದರೆ ಇಸ್ರೋಗೆ ಹಿನ್ನಡೆಯಾಗಿದ್ದಕ್ಕೆ ಸಂಭ್ರಮಿಸಿ, ಬಿಸಿ ರಸಗುಲ್ಲಾ ಸೇವಿಸಿ ಮೃತಪಟ್ಟರು ಎನ್ನುವುದು ಸುಳ್ಳುಸುದ್ದಿ.