[ವೈರಲ್‌ಚೆಕ್‌] ಮೇಲ್‌ ಮಾಡಿದರೆ ಬಿಲ್‌ಗೇಟ್ಸ್‌’ರಿಂದ ನೂರಾರು ಡಾಲರ್‌ ಬಹುಮಾನ..?

Fact Check Bill Gates Will Give You Cash if You Forward This E mail
Highlights

ಮೈಕ್ರೋಸಾಫ್ಟ್‌ ಎಂಬ ದೈತ್ಯ ಸಂಸ್ಥೆಯ ಸಂಸ್ಥಾಪಕ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಬಿಲ್‌ ಗೇಟ್ಸ್‌ ಪ್ರತಿಯೊಬ್ಬರಿಗೂ ಕೋಟ್ಯಧಿಪತಿಯಾಗುವಂತಹ ಒಂದು ಅವಕಾಶವನ್ನು ನೀಡುತ್ತಿದ್ದಾರೆ.

ವಾಷಿಂಗ್ಟನ್ : ಮೈಕ್ರೋಸಾಫ್ಟ್‌ ಎಂಬ ದೈತ್ಯ ಸಂಸ್ಥೆಯ ಸಂಸ್ಥಾಪಕ, ಜಗತ್ತಿನ ಅತ್ಯಂತ ಶ್ರೀಮಂತ ವ್ಯಕ್ತಿಗಳಲ್ಲೊಬ್ಬರಾದ ಬಿಲ್‌ ಗೇಟ್ಸ್‌ ಪ್ರತಿಯೊಬ್ಬರಿಗೂ ಕೋಟ್ಯಧಿಪತಿಯಾಗುವಂತಹ ಒಂದು ಅವಕಾಶವನ್ನು ನೀಡುತ್ತಿದ್ದಾರೆ.

ಅದಕ್ಕಾಗಿ ಮಾಡಬೇಕಿರುವುದು ಇಷ್ಟೆ: ಮೈಕ್ರೋಸಾಫ್ಟ್‌ ಕಳುಹಿಸುವ ಇ-ಮೇಲ್‌ ಅನ್ನು ನಿಮ್ಮ ಸ್ನೇಹಿತರಿಗೆ, ಪರಿಚಯಸ್ಥರಿಗೆ ಎಲ್ಲರಿಗೂ ಫಾರ್ವರ್ಡ್‌ ಮಾಡಿ, ಮೈಕ್ರೋಸಾಫ್ಟ್‌ ನಿಮಗೆ ಅದರ ಕ್ರೆಡಿಟ್‌ ನೀಡಲಿದೆ.

ಇ-ಮೇಲ್‌ ಅನ್ನು ಫಾರ್ವರ್ಡ್‌ ಮಾಡಿದ ಪ್ರತಿಯೊಬ್ಬರಿಗೂ ಮೈಕ್ರೋಸಾಫ್ಟ್‌ ನೂರಾರು ಡಾಲರ್‌ ಹಣವನ್ನು ನೀಡಲಿದೆ. ಈ ಸಂದೇಶ ನಕಲಿಯಲ್ಲ. ಬಿಲ್‌ಗೇಟ್ಸ್‌ ಬಳಿ ಸಾಕಷ್ಟುಹಣವಿದೆ, ಪ್ರಯೋಗಾತ್ಮಕ ಉದ್ದೇಶದಿಂದ ಇದನ್ನು ಅವರು ಮಾಡುತ್ತಿದ್ದಾರೆ ಎಂಬ ಸಂದೇಶ ಹರಿದಾಡುತ್ತಿದೆ.

ಆದರೆ ನಿಜಕ್ಕೂ ಬಿಲ್‌ಗೇಟ್ಸ್‌ ಇ-ಮೇಲ್‌ ಅನ್ನು ಫಾರ್ವರ್ಡ್‌ ಮಾಡಿದವರಿಗೆ ನೂರಾರು ಡಾಲರ್‌ ಹಣ ನೀಡುತ್ತಿದ್ದಾರೆಯೇ ಎಂದು ಹುಡುಕ ಹೊರಟಾಗ ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಈ ಸಂದೇಶ ಸುಳ್ಳು ಎಂದು ತಿಳಿದು ಬಂದಿದೆ.

ಖಾಸಗಿ ಸುದ್ದಿವಾಹಿನಿಯೊಂದು ನಡೆಸಿಕೊಡುವ ‘ಆಸ್ಕ್‌ ಮಿ ಎನಿಥಿಂಗ್‌’ ಕಾರ್ಯಕ್ರಮದಲ್ಲಿ ಈ ಬಗ್ಗೆ ಸ್ಪಷ್ಟೀಕರಣ ನೀಡಿರುವ ಬಿಲ್‌ಗೇಟ್ಸ್‌, ಆ ರೀತಿ ಯಾವುದೇ ಸಂದೇಶವನ್ನೂ ಮೈಕ್ರೋಸಾಫ್ಟ್‌ ಕಂಪನಿ ನೀಡಿಲ್ಲ ಎಂದಿದ್ದಾರೆ. ಅಲ್ಲದೆ ಮೈಕ್ರೋಸಾಫ್ಟ್‌ ಈ ರೀತಿ ಸುಳ್ಳು ಸುದ್ದಿ ಹಬ್ಬಿಸಿದವರ ಬಗ್ಗೆ ಯಾವುದೇ ತನಿಖೆ ನಡೆಸಿ ಕ್ರಮ ಕೈಗೊಂಡಿಲ್ಲ. ಈ ನಕಲಿ ಸಂದೇಶದಿಂದ ಸಾರ್ವಜನಿಕರಿಗೆ ಯಾವುದೇ ತೊಂದರೆ ಉಂಟಾದಲ್ಲಿ ವಿಷಾದಿಸುತ್ತೇವೆ ಎಂದು ತಿಳಿಸಿದ್ದಾರೆ.

loader