ಬಾಳೆಹೊನ್ನೂರು ಬಜರಂಗ ದಳ ಘಟಕ ಈ ಬಾರಿಯ ದತ್ತ ಜಯಂತಿ ಯನ್ನು ಪ್ರತಿಯೊಬ್ಬ ಹಿಂದೂಗಳಿಗೆ ಹಾಗೂ ವಿಶ್ವದಾದ್ಯಂತ ಪರಿಣಾಮಕಾರಿಯಾಗಿ ಮುಟ್ಟಿಸುವ ಉದ್ದೇಶದಿಂದ ಪ್ರತಿಯೊಬ್ಬರು ತಮ್ಮ ಪ್ರೊಫೈಲ್ ಪಿಕ್ಚರ್‌'ಗೆ ಅಳವಡಿಸಿಕೊಳ್ಳಬಹುದಾದ ‘ದತ್ತ ಜಯಂತಿಗೆ ನನ್ನ ಬೆಂಬಲ’ ಎಂಬ ಘೋಷವಾಕ್ಯದಡಿ ರಚಿಸಿರುವ ಫೋಟೋ ಫ್ರೇಮ್ ಸಿದ್ದಪಡಿಸಿ ಕೆಲವೇ ಗಂಟೆಗಳಲ್ಲಿ ಫೇಸ್‌'ಬುಕ್ ಖಾತೆದಾರರ ಮನಗೆದ್ದಿದೆ.

ಬಾಳೆಹೊನ್ನೂರು(ನ.21): ಫೇಸ್‌ಬುಕ್‌'ಅನ್ನು ಯಶಸ್ವಿಯಾಗಿ ಬಳಸಿ ಕೊಂಡಿರುವ ಬಾಳೆಹೊನ್ನೂರು ಬಜರಂಗ ದಳ ಘಟಕ ಈ ಬಾರಿಯ ದತ್ತ ಜಯಂತಿ ಯನ್ನು ಪ್ರತಿಯೊಬ್ಬ ಹಿಂದೂಗಳಿಗೆ ಹಾಗೂ ವಿಶ್ವದಾದ್ಯಂತ ಪರಿಣಾಮಕಾರಿಯಾಗಿ ಮುಟ್ಟಿಸುವ ಉದ್ದೇಶದಿಂದ ಪ್ರತಿಯೊಬ್ಬರು ತಮ್ಮ ಪ್ರೊಫೈಲ್ ಪಿಕ್ಚರ್‌'ಗೆ ಅಳವಡಿಸಿಕೊಳ್ಳಬಹುದಾದ ‘ದತ್ತ ಜಯಂತಿಗೆ ನನ್ನ ಬೆಂಬಲ’ ಎಂಬ ಘೋಷವಾಕ್ಯದಡಿ ರಚಿಸಿರುವ ಫೋಟೋ ಫ್ರೇಮ್ ಸಿದ್ದಪಡಿಸಿ ಕೆಲವೇ ಗಂಟೆಗಳಲ್ಲಿ ಫೇಸ್‌'ಬುಕ್ ಖಾತೆದಾರರ ಮನಗೆದ್ದಿದೆ.

ಫೋಟೋ ಹರಿಬಿಟ್ಟ 6 ತಾಸಿನಲ್ಲೇ 23ಸಾವಿರಕ್ಕೂ ಹೆಚ್ಚು ಮಂದಿ ತಮ್ಮ ಖಾತೆಗಳ ಪ್ರೊಫೈಲ್‌'ಗಳಿಗೆ ಈ ಚಿತ್ರ ಹಾಕಿಕೊಂಡಿದ್ದಾರೆ ಫೇಸ್‌'ಬುಕ್ ಖಾತೆಯಲ್ಲಿ ಪ್ರೊಫೈಲ್ ಪಿಕ್ಚರ್‌'ನಲ್ಲಿ ತಮ್ಮ ಫೋಟೋದೊಂದಿಗೆ ಅಳವಡಿಸಬಹುದಾದ ದತ್ತ ಜಯಂತಿಯ ಕುರಿತಾದ ಫೋಟೋ ಫ್ರೇಮ್ ಅನ್ನು ಬಾಳೆಹೊನ್ನೂರು ಬಜರಂಗದಳ ಘಟಕದ ಮುಖಂಡ ಬಿ. ಜಗದೀಶ್ಚಂದ್ರ ತಯಾರಿಸಿ ಮೊದಲು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದು, ನಂತರ ಅದನ್ನು ಸಾರ್ವಜನಿಕರು ಸಹ ತಮ್ಮ ಖಾತೆಯಲ್ಲಿ ಬಳಸಿಕೊಳ್ಳಲು ಅನುವಾಗುವಂತೆ ಮಾಡಿ ತಾಂತ್ರಿಕವಾಗಿ ಫೇಸ್‌'ಬುಕ್‌'ನಲ್ಲಿ ಪೇಜ್ ತಯಾರಿಸಿದ್ದಾರೆ.

ಫೇಸ್‌'ಬುಕ್ ಪೇಜ್‌'ನಲ್ಲಿ ಫೋಟೋ ಪ್ರೇಮ್ ತಯಾರಿಸಿ, ಖಾತೆದಾರರು ಬಳಸಿಕೊಳ್ಳಲು ಬಿಟ್ಟ ಕೇವಲ 6 ಗಂಟೆಗಳಲ್ಲಿ 23 ಸಾವಿರಕ್ಕೂ ಅಧಿಕ ಫೇಸ್‌'ಬುಕ್ ಖಾತೆದಾರರು ಫೋಟೋ ಫ್ರೇಮ್ ಅನ್ನುತಮ್ಮ ಪ್ರೊಫೈಲ್ ಪಿಕ್ಚರ್‌'ಗೆ ಹಾಕಿಕೊಂಡಿದ್ದಾರೆ. ಮಹಿಳೆಯರೂ ಈ ಚಿತ್ರವನ್ನು ತಮ್ಮ ಪ್ರೋಫೈಲ್‌'ಗಳಿಗೆ ಹಾಕಿಕೊಂಡಿರುವುದು ವಿಶೇಷ.