ಗ್ರಾಹಕರ ದತ್ತಾಂಶ ಸೋರಿಕೆ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾದ ಬೆನ್ನಲ್ಲೇ, ಹಗರಣದ ಕೇಂದ್ರಬಿಂದು ಕೇಂಬ್ರಿಜ್‌ ಅನಾಲಿಟಿಕಾ ಕಂಪನಿ ಇರುವ ಬ್ರಿಟನ್‌ನಲ್ಲಿ ಫೇಸ್‌ಬುಕ್‌ ಸಂಸ್ಥೆ ಜನರ ಕ್ಷಮೆ ಯಾಚಿಸಿದೆ.

ಲಂಡನ್‌: ಗ್ರಾಹಕರ ದತ್ತಾಂಶ ಸೋರಿಕೆ ಜಾಗತಿಕ ಮಟ್ಟದಲ್ಲಿ ಭಾರೀ ಸುದ್ದಿಯಾದ ಬೆನ್ನಲ್ಲೇ, ಹಗರಣದ ಕೇಂದ್ರಬಿಂದು ಕೇಂಬ್ರಿಜ್‌ ಅನಾಲಿಟಿಕಾ ಕಂಪನಿ ಇರುವ ಬ್ರಿಟನ್‌ನಲ್ಲಿ ಫೇಸ್‌ಬುಕ್‌ ಸಂಸ್ಥೆ ಜನರ ಕ್ಷಮೆ ಯಾಚಿಸಿದೆ.

ಫೇಸ್‌ಬುಕ್‌ ಸಂಸ್ಥಾಪಕ ಮಾರ್ಕ್ ಜುಕ್‌ರ್‌ಬರ್ಗ್‌ ಅಮೆರಿಕ ಮತ್ತು ಬ್ರಿಟಿಷ್‌ ದಿನಪತ್ರಿಕೆಗಳಲ್ಲಿ ಕ್ಷಮೆಯಾಚನೆಯ ದೊಡ್ಡ ಜಾಹೀರಾತು ಪ್ರಕಟಿಸಿದ್ದಾರೆ. ‘ನಿಮ್ಮ ಮಾಹಿತಿಯ ಸಂರಕ್ಷಣೆ ನಮ್ಮ ಹೊಣೆ, ನಮ್ಮಿಂದ ಅದು ಸಾಧ್ಯವಾಗದಿದ್ದಲ್ಲಿ ನಾವು ಅರ್ಹರಲ್ಲ ಎಂದರ್ಥ’ ಎಂದು ಕ್ಷಮೆಯಾಚಿಸಿದ್ದಾರೆ.

ಸಂಡೇ ಟೈಮ್ಸ್‌, ದಿ ಅಬ್‌ಸರ್ವರ್‌, ನ್ಯೂಯಾರ್ಕ್ ಟೈಮ್ಸ್‌, ವಾಷಿಂಗ್ಟನ್‌ ಪೋಸ್ಟ್‌ ಸೇರಿ 6 ಪ್ರಮುಖ ಬ್ರಿಟಿಷ್‌ ದೈನಿಕಗಳಲ್ಲಿ ಈ ಬಗ್ಗೆ ಜಾಹೀರಾತು ನೀಡಲಾಗಿದೆ.