ನ್ಯೂಜಿಲೆಂಡ್‌ನ ಮಸೀದಿ ಮೇಲಿನ ದಾಳಿ ವಿಡಿಯೋದಿಂದ ಫೇಸ್‌ಬುಕ್‌ಗೆ ಸಂಕಷ್ಟ | ಫೇಸ್‌ಬುಕ್ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ | ಕೂಡಲೇ ವಿಡಿಯೋ ಡಿಲೀಟ್ ಮಾಡಿದ ಫೇಸ್‌ಬುಕ್
ಬೆಂಗಳೂರು (ಮಾ. 19): ನ್ಯೂಜಿಲೆಂಡ್‌ನ ಮಸೀದಿ ಮೇಲಿನ ದಾಳಿ ನಡೆಸಿ 50 ಜನರನ್ನು ಕೊಂದ ಉಗ್ರ, ಈ ಘಟನೆಯನ್ನು ಫೇಸ್‌ಬುಕ್‌ನಲ್ಲಿ ನೇರಪ್ರಸಾರ ಮಾಡಿದ ಸಂಗತಿ ಇದೀಗ ಫೇಸ್‌ಬುಕ್‌ಗೇ ಭಾರೀ ಸಂಕಷ್ಟ ತಂದಿಟ್ಟಿದೆ.
ಇಂಥ ಅನಾಹುತಕಾರಿ ಘಟನೆಯನ್ನು ನೇರಪ್ರಸಾರಕ್ಕೆ ಅವಕಾಶ ಮಾಡಿಕೊಟ್ಟಆನ್‌ಲೈನ್ ಸಾಮಾಜಿಕ ಜಾಲತಾಣದ ವಿರುದ್ಧ ಜಾಗತಿಕ ಮಟ್ಟದಲ್ಲಿ ಭಾರೀ ಆಕ್ರೋಶ ವ್ಯಕ್ತವಾಗಿದೆ. ಈ ನಡುವೆ ನ್ಯೂಜಿಲೆಂಡ್ ಸರ್ಕಾರ ಕೂಡಾ ಈ ಬಗ್ಗೆ ಅಮೆರಿಕ ಮೂಲದ ಕಂಪನಿಯಿಂದ ಸ್ಪಷ್ಟನೆ ಕೋರಿದೆ.
ಅದರ ಬೆನ್ನಲ್ಲೇ, ವಿಶ್ವದಾದ್ಯಂತ ವೈರಲ್ ಆಗಿದ್ದ ಉಗ್ರ ದಾಳಿಯ 15 ಲಕ್ಷ ವಿಡಿಯೋಗಳನ್ನು ಅಳಿಸಿಹಾಕಿರುವುದಾಗಿ ಫೇಸ್‌ಬುಕ್ ಹೇಳಿದೆ. ‘ರಿಯಲ್ ಟೈಂ ಟೆರರ್’ ಎಂಬ ಹೆಸರಿನಲ್ಲಿ ಅಪ್‌ಲೋಡ್ ಆಗಿದ್ದು ಈ ವಿಡಿಯೋವನ್ನು ಗಮನಕ್ಕೆ ಬಂದ ತಕ್ಷಣ ತಡೆಹಿಡಿದು ಕಿತ್ತು ಹಾಕಲಾಗಿದೆ. ಅಲ್ಲದೇ ಅಪ್‌ಲೋಡ್ ಮಾಡಿದ ವ್ಯಕ್ತಿಯ ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂ ಖಾತೆಯನ್ನು ನಿರ್ಬಂಧಿಸಲಾಗಿದೆ ಎಂದು ಫೇಸ್‌ಬುಕ್ ಹೇಳಿದೆ.
