ಮಂಗಳೂರಿನಲ್ಲಿ ಪಿಲಿಕೊಳದಲ್ಲಿ ನಿನ್ನೆ ಯುವತಿಯರ ಮೇಲೆ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ ಬೆನ್ನಲ್ಲೇ ಇದೀಗ ಫೇಸ್’ಬುಕ್ ನೈತಿಕಗಿರಿಯೊಂದು ಬೆಳಕಿಗೆ ಬಂದಿದೆ.

ಮಂಗಳೂರು (ಜ.3): ಮಂಗಳೂರಿನಲ್ಲಿ ಪಿಲಿಕೊಳದಲ್ಲಿ ನಿನ್ನೆ ಯುವತಿಯರ ಮೇಲೆ ನೈತಿಕ ಪೊಲೀಸ್ ಗಿರಿ ಪ್ರದರ್ಶಿಸಿದ ಬೆನ್ನಲ್ಲೇ ಇದೀಗ ಫೇಸ್ಬುಕ್ ನೈತಿಕಗಿರಿಯೊಂದು ಬೆಳಕಿಗೆ ಬಂದಿದೆ.

ಮಂಗಳೂರಿನಲ್ಲಿ ಇತ್ತೀಚೆಗೆ ಲವ್ ಜಿಹಾದ್ ಪ್ರಕರಣಗಳು ಹೆಚ್ಚಾಗುತ್ತಿದೆ ಇದಕ್ಕೆ ನಾವು ಎಚ್ಚರಿಕೆ ನೀಡುತ್ತಿದ್ದೇವೆ ಎಂದು ವೀರ ಕೇಸರಿ ಎಂಬ ಫೇಸ್ಬುಕ್ ಪುಟದಲ್ಲಿ ಕೆಲವು ಪೋಸ್ಟ್ ಹಾಕಲಾಗಿದೆ

ಬುದ್ದಿ ಮಾತು ಹೇಳಿದ್ದಾಯಿತು. ಎಚ್ಚರಿಕೆಯನ್ನು ಕೊಟ್ಟಿದ್ದಾಯಿತು. ಇನ್ನೇನಿದ್ದರೂ ಕಪಾಳಕ್ಕೆ ಬಾರಿಸುವುದೊಂದೆ ದಾರಿ ಎಂದು ಹಾಕಲಾಗಿದೆ. ಅಲ್ಲದೇ ಇತ್ತೀಚೆಗೆ ನಡೆಯುತ್ತಿರುವ ಕೆಲವು ಧರ್ಮ ವಿರೋಧಿ ಕೃತ್ಯಗಳನ್ನು ಗಮನಿಸಿದರೆ ನಮ್ಮ ಸಂಸ್ಕೃತಿ ಅವನತಿಗೆ ನಾವೇ ಕಾರಣವಾಗುತ್ತಿದ್ದೇವೆ ಎನಿಸುತ್ತಿದೆ . ಇದಕ್ಕೆ ಕಾರಣ ಲವ್ ಜಿಹಾದ್ ಎಂದು ಪೋಸ್ಟ್ ಮಾಡಲಾಗಿದೆ.