ನಮ್ಮ ಮಾಹಿತಿಗಳು ಸೋರಿಕೆಯಾಗುತ್ತಿವೆ, ಖಾಸಗಿ ಬದುಕು ಬಯಲಾಗುತ್ತಿದೆ, ನಮ್ಮ ಗುಟ್ಟುಗಳು ನಮಗೇ ಗೊತ್ತಿಲ್ಲದಂತೆ ರಟ್ಟಾಗುತ್ತಿವೆ ಎಂಬ ಶಂಕೆಯ ಜೊತೆಗೇ, ಮಾಹಿತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಅಲ್ಲಲ್ಲಿ ನಿಜವಾಗುತ್ತಿದೆ. ಈಗಾಗಲೇ ಅನೇಕ ಗಣ್ಯರು ಫೇಸ್‌'ಬುಕ್ ಖಾತೆಯನ್ನು ಡಿಲೀಟ್ ಮಾಡುವ ಮೂಲಕ ಫೇಸ್‌ಬುಕ್ ಡಿಲೀಟ್ ಆಂದೋಲಕ್ಕೆ ಕೈ ಜೋಡಿಸಿದ್ದಾರೆ.
ಫೇಸ್'ಬುಕ್ ನಮ್ಮ ಸಾಮಾಜಿಕ ಸಂಬಂಧಗಳನ್ನು ಉತ್ತಮಪಡಿಸುತ್ತದೆ ಎಂದು ನಂಬುತ್ತಾ, ಎಲ್ಲರೂ ಫೇಸ್'ಬುಕ್ ಅಕೌಂಟುಗಳನ್ನು ಹೊಂದಲು ಹಂಬಲಿಸುತ್ತಿರುವ ಹೊತ್ತಿಗೇ, ಡಿಲೀಟ್ ಫೇಸ್'ಬುಕ್ ಎಂಬ ಸಂಚಲನೆಯೊಂದು ಫೇಸ್'ಬುಕ್ ಬಳಕೆದಾರರಲ್ಲಿ ಆರಂಭವಾಗಿದೆ. ಫೇಸ್'ಬುಕ್ ಎಂಬುದು ಅಂದುಕೊಂಡಷ್ಟು ಸುರಕ್ಷಿತವಲ್ಲ ಎಂಬುದು ಕ್ರಮೇಣ ಗೊತ್ತಾಗುತ್ತಿದೆ. ನಮ್ಮ ಮಾಹಿತಿಗಳು ಸೋರಿಕೆಯಾಗುತ್ತಿವೆ, ಖಾಸಗಿ ಬದುಕು ಬಯಲಾಗುತ್ತಿದೆ, ನಮ್ಮ ಗುಟ್ಟುಗಳು ನಮಗೇ ಗೊತ್ತಿಲ್ಲದಂತೆ ರಟ್ಟಾಗುತ್ತಿವೆ ಎಂಬ ಶಂಕೆಯ ಜೊತೆಗೇ, ಮಾಹಿತಿಗಳನ್ನು ಮಾರಾಟ ಮಾಡಲಾಗುತ್ತಿದೆ ಎಂಬ ಸುದ್ದಿ ಅಲ್ಲಲ್ಲಿ ನಿಜವಾಗುತ್ತಿದೆ. ಈಗಾಗಲೇ ಅನೇಕ ಗಣ್ಯರು ಫೇಸ್'ಬುಕ್ ಖಾತೆಯನ್ನು ಡಿಲೀಟ್ ಮಾಡುವ ಮೂಲಕ ಫೇಸ್ಬುಕ್ ಡಿಲೀಟ್ ಆಂದೋಲಕ್ಕೆ ಕೈ ಜೋಡಿಸಿದ್ದಾರೆ.
ಅಷ್ಟಕ್ಕೂ ಫೇಸ್'ಬುಕ್'ನಿಂದಾಗುವ ಹಾನಿಗಳೇನು..?
1. ಹ್ಯಾಕರ್'ಗಳು ಫೇಸ್'ಬುಕ್'ನಿಂದ ಮಾಹಿತಿಗಳನ್ನು ಕದಿಯುತ್ತಿದ್ದಾರೆ. ಅಮೆರಿಕಾದಂಥ ರಾಷ್ಟ್ರಗಳಲ್ಲಿ ಫೇಸ್'ಬುಕ್ ಯೂಸರ್'ನೇಮ್ ಮತ್ತು ಪಾಸ್'ವರ್ಡುಗಳನ್ನು ಮಾರಾಟ ಮಾಡುವ ಹ್ಯಾಕರ್'ಗಳ ಸಂಖ್ಯೆ ಹೆಚ್ಚಾಗಿದೆ. ಹದಿನೈದು ಲಕ್ಷ ಫೇಸ್'ಬುಕ್ ಅಕೌಂಟ್ ಮಾಹಿತಿಗಳು ಮಾರಾಟಕ್ಕಿವೆ ಎಂದು ಒಬ್ಬ ಹ್ಯಾಕರ್ ಎರಡು ವರ್ಷಗಳ ಹಿಂದೆಯೇ ಘೋಷಿಸಿದ್ದು. ಅಂಥ ಎಷ್ಟು ಮಂದಿ ಹ್ಯಾಕರ್'ಗಳು ಕಾರ್ಯಪ್ರವೃತ್ತರಾಗಿರಬಹುದು ಅನ್ನುವುದು ಲೆಕ್ಕಕ್ಕೆ ಸಿಗದ ಆತಂಕ.
2. ಫೇಸ್ಬುಕ್ ನಿಮ್ಮ ಮಾಹಿತಿಗಳನ್ನು ಮೂರನೆಯ ವ್ಯಕ್ತಿಗೆ ರವಾನಿಸುತ್ತದೆ. ನಿಮಗೇ ಗೊತ್ತಿಲ್ಲದ ಹಾಗೆ ನಿಮ್ಮ ಎಲ್ಲ ಖಾಸಗಿ ಮಾಹಿತಿಗಳನ್ನೂ ನೀವು ಷೇರ್ ಮಾಡಿಕೊಳ್ಳುತ್ತಿರುತ್ತೀರಿ.
3. ಫೇಕ್ ಪ್ರೊಫೈಲ್'ಗಳು ನಿಮ್ಮ ನಿದ್ದೆಗೆಡಿಸುತ್ತವೆ ಹಾಗೂ ಸುಳ್ಳು ಮಾಹಿತಿಯನ್ನು ನಿಮಗೆ ನೀಡುತ್ತಲೇ ಇರುತ್ತವೆ. ಅವುಗಳ ಮೂಲಕ ನಿರಂತರವಾಗಿ ನಿಮ್ಮ ಮೇಲೆ ಮಾನಸಿಕ ಹಲ್ಲೆ ನಡೆಸುತ್ತವೆ.
4. ಪ್ರೈವೆಸಿಯ ಸೆಟ್ಟಿಂಗುಗಳು ತನ್ನಿಂತಾನೇ ರೀಸೆಟ್ ಆಗುವುದನ್ನು ಅನೇಕರು ಮನಗಂಡಿದ್ದಾರೆ. ಇದರ ಹಿಂದೆ ಹ್ಯಾಕರುಗಳ ಕೈವಾಡ ಇರುವುದನ್ನು ಗಮನಿಸಿದ್ದಾರೆ. ಫೇಸ್'ಬುಕ್ಕಿಗೆ ನೀವು ಹಾಕುವ ಫೋನ್ ನಂಬರುಗಳು ವ್ಯಾಪಾರಿ ಸಂಸ್ಥೆಗಳ ಕೈ ಸೇರುತ್ತಿವೆ.
5. ಫೇಸ್'ಬುಕ್ಕುಗಳ ಮೂಲಕ ಮಾಲ್'ವೇರ್'ಗಳನ್ನು ಹಂಚುವ ಕೆಲಸ ಅವ್ಯಾಹತವಾಗಿ ನಡೆಯುತ್ತಲೇ ಇದೆ. ಈ ಮಾಲ್'ವೇರ್'ಗಳು ನಿಮ್ಮ ಕಂಪ್ಯೂಟರಿನಲ್ಲಿ ಅಡಗಿರುವ ಎಲ್ಲಾ ಮಾಹಿತಿಗಳನ್ನು ಕದಿಯುತ್ತಿವೆ. ಮಾಲ್'ವೇರ್'ಗಳಿಂದ ನಿಮ್ಮ ಕಂಪ್ಯೂಟರಿನಲ್ಲಿ ಅಡಗಿರುವ ಬ್ಯಾಂಕ್ ಖಾತೆ ವಿವರಗಳಿಗೆ ಕನ್ನ ಹಾಕುವುದು ಹ್ಯಾಕರ್'ಗಳಿಗೆ ಕಷ್ಟವೇನಲ್ಲ. ಹಾಗೆ ಕನ್ನ ಹಾಕುವುದಕ್ಕೆ ಎಫ್'ಬಿ ಸುಲಭದ ಒಳಮಾರ್ಗವಾಗಿ ಕೆಲಸ ಮಾಡುತ್ತದೆ.
