ಜಿಯೋ ಸ್ಮಾರ್ಟ್’ಫೋನ್ ಬಳಕೆದಾರರಿಗೆ ಗುಡ್ ನ್ಯೂಸ್!

Facebook App on Jio Smartphones
Highlights

  • ಜಿಯೋ ಫೋನಿಗಾಗಿಯೇ ವಿಶೇಷವಾಗಿ ವಿನ್ಯಾಸಗೊಳಿಸಲಾದ ಫೇಸ್ಬುಕ್ ಆ್ಯಪ್
  • ಫೇಸ್ಬುಕ್’ನ ಜನಪ್ರಿಯ ಫೀಚರ್ಸ್’ಗಳಾದ ನ್ಯೂಸ್ ಫೀಡ್ ಮತ್ತು ಫೊಟೋಗಳಿಗೂ ಸಪೋರ್ಟ್

ಮುಂಬೈ: ಜನಪ್ರಿಯ ಸೋಶಿಯಲ್ ಮೀಡಿಯಾ ಫೇಸ್ಬುಕ್’ನ ಆ್ಯಪ್ ಇದೀಗ ಜಿಯೋ ಸ್ಮಾರ್ಟ್’ಫೋನ್’ನಲ್ಲೂ ಲಭ್ಯವಾಗಿದೆ.

ಫೇಸ್ಬುಕ್ ಆ್ಯಪ್’ನ ಈ ಹೊಸ ಆವೃತ್ತಿಯನ್ನು ವಿಶೇಷವಾಗಿ ಜಿಯೋ ಫೋನಿಗಾಗಿಯೇ ವಿನ್ಯಾಸಗೊಳಿಸಲಾಗಿದೆ. ಫೇಸ್ಬುಕ್’ನ ಉತ್ತಮ ಅನುಭವ ನೀಡುವ ನಿಟ್ಟಿನಲ್ಲಿ ಜಿಯೋಕಿಯೋಸ್ ಎಂಬ ವೆಬ್ ಆಧಾರಿತ ಆಪರೇಟಿಂಗ್ ಸಿಸ್ಟಮ್  ಮೇಲೆ ಇದನ್ನು ಅಭಿವೃದ್ಧಿಪಡಿಸಲಾಗಿದೆಯೆಂದು ಪ್ರಕಟಣೆ ತಿಳಿಸಿದೆ.

ಈ ಮೂಲಕ ಜಿಯೋಫೋನ್ ಬಳಕೆದಾರರು  ತಮ್ಮ ಪ್ರೀತಿಪಾತ್ರರೊಂದಿಗೆ ಫೇಸ್ಬುಕ್ ಮೂಲಕ ಸಂಪರ್ಕ ಸಾಧಿಸಲು ಇದು ಸಹಕಾರಿಯಾಗಿದೆ, ಈ  ಆ್ಯಪ್ ಮೂಲಕ ಪುಶ್ ನೋಟಿಫಿಕೇಶನ್’ಗಳು, ವೀಡಿಯೋಗಳು ಮತ್ತು ಬಾಹ್ಯ ವಿಷಯಗಳಿರುವ ಲಿಂಕ್’ಗಳನ್ನು ಕೂಡಾ ತೆರೆಯಬಹುದಾಗಿದೆ. ಫೇಸ್ಬುಕ್’ನ ಜನಪ್ರಿಯ ಫೀಚರ್ಸ್’ಗಳಾದ ನ್ಯೂಸ್ ಫೀಡ್ ಮತ್ತು ಫೊಟೋಗಳಿಗೂ  ಇದು ಸಪೋರ್ಟ್ ಮಾಡುತ್ತದೆ.

 ``ಜಿಯೋ ಫೋನ್ ವಿಶ್ವದ ಅತ್ಯಂತ ಕೈಗೆಟಕುವ ಸ್ಮಾರ್ಟ್’ಫೋನ್ ಆಗಿದ್ದು, ವಿಶೇಷವಾಗಿ ಭಾರತೀಯರಿಗಾಗಿ ಬೇಕಾದ ತಂತ್ರಜ್ಞಾನದೊಂದಿಗೆ ನಿರ್ಮಿಸಲಾಗಿದೆ. ಪ್ರತಿಯೊಬ್ಬ ಭಾರತೀಯ ಡಾಟಾ ಶಕ್ತಿಯೊಂದಿಗೆ ಸಶಕ್ತಗೊಳ್ಳಬೇಕೆಂದು ಇದನ್ನು ನಿರ್ಮಿಸಲಾಗಿದೆ, ಎಂದು ಜಿಯೋ ನಿರ್ದೇಶಕ ಆಕಾಶ್ ಅಂಬಾನಿ  ಈ ಸಂದರ್ಭದಲ್ಲಿ ಹೇಳಿದ್ದಾರೆ.

 ``ಜಿಯೋದೊಂದಿಗಿನ ನಮ್ಮ ಸಹಭಾಗಿತ್ವದ ಬಗ್ಗೆ ತುಂಬಾ ಖುಷಿಯಾಗುತ್ತಿದೆ ಮತ್ತು ಈಗ ಒದಗಿಸಲಾಗುತ್ತಿರುವ ಅವಕಾಶವು ಜಿಯೋಫೋನ್ ಬಳಸುತ್ತಿರುವ ಲಕ್ಷಾಂತರ ಮಂದಿಗೆ ಫೇಸ್ಬುಕ್’ನ  ಅತ್ಯುತ್ತಮ ಅನುಭವ ಹೊಂದಬಹುದಾಗಿದೆ'' ಎಂದು ಫೇಸ್ಬುಕ್ ಮೊಬೈಲ್ ಸಹಭಾಗಿತ್ವದ ಉಪಾಧ್ಯಕ್ಷ ಫ್ರಾನ್ಸಿಸ್ಕೋ ವರೇಲಾ ಹೇಳಿದ್ದಾರೆ.

 

loader