'ಈಗ ನಾವು ಹೊಸ ನಿಯಮವನ್ನು ಅಳವಡಿಸಿಕೊಂಡಿದ್ದು ನೀವು ನನಗೆ ಅಥವಾ ಸಂಬಂಧಿಸಿದ ರಾಯಭಾರಿ ಕಚೇರಿಗೆ ಟ್ವೀಟ್ ಅಥವಾ ಟ್ಯಾಗ್ ಮಾಡಿದರೆ ಖುದ್ದಾಗಿ ನಾನೆ ನಿಮ್ಮ ಟ್ವೀಟ್'ಗಳಿಗೆ ಆಯಾ ರಾಯಭಾರಿ ಕಚೇರಿಯೊಂದಿಗೆ ವ್ಯವಹರಿಸಿ ಸಮಸ್ಯೆಯನ್ನು ಪರಿಹರಿಸುವೆ'ಎಂದು
ನವದೆಹಲಿ(ಜ.8): ವಿದೇಶದಲ್ಲಿ ನಿಮಗೆ ತೊಂದರೆಯಾಗಿದ್ದಲ್ಲಿ ನನ್ನ ಟ್ವಿಟರ್ ಅಕೌಂಟಿಗೆ ಹಾಗೂ ಆಯಾ ರಾಯಭಾರಿ ಕಚೇರಿಗೆ ಟ್ವೀಟ್ ಅಥವಾ ಟ್ಯಾಗ್ ಮಾಡಿ ಎಂದು ಕೇಂದ್ರ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತಿಳಿಸಿದ್ದಾರೆ.
'ಈಗ ನಾವು ಹೊಸ ನಿಯಮವನ್ನು ಅಳವಡಿಸಿಕೊಂಡಿದ್ದು ನೀವು ನನಗೆ ಅಥವಾ ಸಂಬಂಧಿಸಿದ ರಾಯಭಾರಿ ಕಚೇರಿಗೆ ಟ್ವೀಟ್ ಅಥವಾ ಟ್ಯಾಗ್ ಮಾಡಿದರೆ ಖುದ್ದಾಗಿ ನಾನೆ ನಿಮ್ಮ ಟ್ವೀಟ್'ಗಳಿಗೆ ಆಯಾ ರಾಯಭಾರಿ ಕಚೇರಿಯೊಂದಿಗೆ ವ್ಯವಹರಿಸಿ ಸಮಸ್ಯೆಯನ್ನು ಪರಿಹರಿಸುವೆ'ಎಂದು ಟ್ವೀಟ್ ಮಾಡಿದ್ದಾರೆ.
' @sushmaswaraj. pic.twitter.com/cFHOamwqPh /1' ಸಚಿವರು ತಮ್ಮ ಟ್ವೀಟರ್ ಅಕೌಂಟ್'ಅನ್ನು ಸಹ ತಿಳಿಸಿದ್ದಾರೆ.
ವಿದೇಶಾಂಗ ಸಚಿವರು ಇತ್ತೀಚಿಗಷ್ಟೆ ವಿದೇಶಿ ವಾಸಿಗಳ ಸಮಸ್ಯೆ ಪರಿಹಾರಕ್ಕಾಗಿ 'ಟ್ವಿಟರ್ ಸೇವಾ' ಯೋಜನೆಯನ್ನು ಸಹ ಜಾರಿಗೊಳಿಸಿದ್ದು, ಈ ಯೋಜನೆಯು ಭಾರತೀಯ ರಾಯಭಾರ ಕಚೇರಿಗಳಲ್ಲಿರುವ 198 ಟ್ವಿಟರ್ ಅಕೌಂಟ್'ಗಳಿಗೆ ಹಾಗೂ 29 ಪ್ರಾದೇಶಿಕ ಪಾಸ್'ಪೋರ್ಟ್ ಕಚೇರಿಗಳಿಗೆ ಬೆಂಬಲ ನೀಡುತ್ತವೆ.
