ಮಧುರೈ(ಅ.15): ತಮಿಳುನಾಡು ಸಿಎಂ ಜಯಲಲಿತಾ ಆಸ್ಪತ್ರೆ ಸೇರಿದ ದಿನದಿಂದ ಅವರ ಅಭಿಮಾನಿಗಳು ಅಮ್ಮನ ಚೇತರಿಕಗೆ ವಿವಿಧ ರೀತಿಯ ವಿಶಿಷ್ಟ ಪೂಜೆ ಪುನಸ್ಕಾರಗಳನ್ನ ನಡೆಸುತ್ತಿದ್ದಾರೆ. ಇಲ್ಲೊಬ್ಬ ಻ಭಿಮಾನಿ ಅಮ್ಮನ ಚೇತರಿಕೆಗೆ 24 ಗಂಟೆ ಮುಳ್ಳಿನ ಮೇಲೆ ಮಲಗುವ ಕಠಿಣ ವ್ರತ ಕೈಗೊಂಡಿದ್ದಾನೆ.

ಮಧುರೈನ ಅಣ್ಣಾಡಿಎಂಕೆ ಕಾರ್ಯಕರ್ತ ಇರುಲಂಡಿ ಇಂತಹ ಕಠಿಣ ವ್ರತ ಕೈಗೊಂಡಿದ್ದಾರೆ. ಪೆಚಿಯಮ್ಮನ್ ದೇವರ ಕೃಪೆಗಾಗಿ ಇರುಲಂಡಿ ಈ ವ್ರತ ಮಾಡುತ್ತಿದ್ದಾರೆ.