ಸಂಬಂಧಗಳು ಅನೈತಿಕಕ್ಕೆ ತಿರುಗಲು ಕಾರಣಗಳಿವು

Extramarital affairs and Reasons
Highlights

ನಮ್ಮ ಸಮಾಜದಲ್ಲಿ ವಿವಾಹಬಾಹಿರ ಹಾಗೂ ಅನೈತಿಕ ಸಂಬಂಧಗಳು ಇರುವುದು ಸಹಜ. ಇದಕ್ಕೆ ವೈಯುಕ್ತಿಕ ಸೇರಿದಂತೆ ಹಲವಾರು ಕಾರಣಗಳಿವೆ. ಕೆಲವೊಂದು
ಮನೋವೈಜ್ಞಾನಿಕ ಕಾರಣಗಳು ಇಂತಿವೆ

ನಮ್ಮ ಸಮಾಜದಲ್ಲಿ ವಿವಾಹಬಾಹಿರ ಹಾಗೂ ಅನೈತಿಕ ಸಂಬಂಧಗಳು ಇರುವುದು ಸಹಜ. ಇದಕ್ಕೆ ವೈಯುಕ್ತಿಕ ಸೇರಿದಂತೆ ಹಲವಾರು ಕಾರಣಗಳಿವೆ. ಕೆಲವೊಂದು ಮನೋವೈಜ್ಞಾನಿಕ ಕಾರಣಗಳು ಇಂತಿವೆ

1)  ಮದುವೆಯ ಆತುರ
ತೀರ ಚಿಕ್ಕ ವಯಸ್ಸಿಗೆ  ಮದುವೆಯಾದವರು 40 ವರ್ಷಕ್ಕೆ ಕುಟುಂಬದ ಜಂಜಾಟಗಳಿಂದ ಬೇಸತ್ತು ಹೋಗಿರುತ್ತಾರೆ. ಯೌವ್ವನ ಹಾಳಾಯಿತಲ್ಲ ಎಂದು ಭಾವಿಸುತ್ತಾರೆ. ತಮ್ಮ ಪತ್ನಿಗಿಂತ ಬೇರೆಯವರೆ ಆಕರ್ಷಿತರನ್ನಾಗಿ ಬಯಸಿಕೊಳ್ಳುತ್ತಾರೆ. ಇದು ತಾನಾಗಿಯೇ ಅನೈತಿಕಕ್ಕೆ ತಿರುಗುತ್ತದೆ.

2) ಬಲವಂತದದ ಮದುವೆ
ಬಲವಂತದ ಮದುವೆ ಅನೈತಕಕ್ಕೆ ಪ್ರಮುಖ ಕಾರಣ. ವಿವಾಹವಾದ  ಬಳಿಕ ತಮ್ಮ ಮನಸ್ಸಿಗೆ ಇಷ್ಟವಾಗುವವರನ್ನು ಅಪೇಕ್ಷಿಸಲು ಬಯಸುತ್ತಾರೆ. ಗೆಳೆತನ ಮಾಡಿಕೊಂಡು ದೈಹಿಕ ಸಂಬಂಧದ ಕಡೆ ಮುಖ ಮಾಡುತ್ತಾರೆ.  

3) ಸಿಗದ ಸುಖ ಸಿಗದಾಗ 
ತಮ್ಮ ಪತ್ನಿಯಿಂದ  ಅಥವಾ ಗಂಡನಿಂದ ಲೈಂಗಿಕ ತೃಪ್ತಿ ಸಿಗದಿದ್ದಾಗ  ವಿವಾಹೇತರ ಸಂಬಂಧಕ್ಕೆ ಮುಂದಾಗುವುದು ಸಹಜ. 

4) ಆರ್ಥಿಕ ತೊಂದರೆ
ಆರ್ಥಿಕ ತೊಂದರೆಯಿಂದ ದಂಪತಿ ಮಧ್ಯೆ ಜಗಳವಾಗಿ ತಮ್ಮ ಆಸೆ ಆಕಾಂಕ್ಷೆಗಳನ್ನು ಈಡೇರಿಸಿಕೊಳ್ಳಲು ಬೇರೆಯವರನ್ನು ಆಕರ್ಷಿಸಲು ಮುಂದಾಗುತ್ತಾರೆ.  

5) ಸೇಡು ಕಾರಣವಾಗಬಹುದು 
ಪತಿ ಅಥವಾ ಪತ್ನಿ ಯಾವುದಾದರೂ ಅನೈತಿಕ ಸಂಬಂಧದಲ್ಲಿ ಭಾಗಿಯಾಗಿದ್ದರೆ ಪಾಠ ಕಲಿಸಲು ಬೇರೆಯವರ ಬಳಿ ಸಂಬಂಧ ಬೆಳೆಸಲು ಮನಸ್ಸು ಮಾಡುತ್ತಾರೆ.

loader