ಜನಸಾಮಾನ್ಯರಿಂದಲೇ ನೇರವಾಗಿ ಅಭಿಪ್ರಾಯ ತಿಳಿದುಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಅದಕ್ಕಾಗಿಯೇ ಆ್ಯಪ್ ಬಿಡುಗಡೆ ಮಾಡಿದ್ದಾರೆ.

ನವದೆಹಲಿ(ನ. 22): ಕಪ್ಪುಹಣ ನಿಗ್ರಹಿಸುವ ಉದ್ದೇಶದಿಂದ ನರೇಂದ್ರ ಮೋದಿಯವರು 500 ಮತ್ತು 1000 ಸಾವಿರ ರೂ ಮುಖಬೆಲೆಯ ನೋಟುಗಳನ್ನು ರದ್ದುಗೊಳಿಸಿದ ಕ್ರಮಕ್ಕೆ ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗುತ್ತದೆ. ವಿರೋಧ ಪಕ್ಷಗಳು ಸರಕಾರದ ಕ್ರಮವನ್ನು ತೀವ್ರವಾಗಿ ವಿರೋಧಿಸಿವೆ. ಜನಸಾಮಾನ್ಯರಿಗೆ ಸರಕಾರ ಅನಗತ್ಯ ತೊಂದರೆ ಕೊಡುತ್ತಿದ್ದಾರೆಂಬುದು ವಿರೋಧಿಗಳ ಪ್ರಮುಖ ಆಕ್ಷೇಪವಾಗಿದೆ. ಈ ಹಿನ್ನೆಲೆಯಲ್ಲಿ ಜನಸಾಮಾನ್ಯರಿಂದಲೇ ನೇರವಾಗಿ ಅಭಿಪ್ರಾಯ ತಿಳಿದುಕೊಳ್ಳಲು ಪ್ರಧಾನಿ ಮೋದಿ ಮುಂದಾಗಿದ್ದಾರೆ. ಅದಕ್ಕಾಗಿಯೇ ಒಂದು ಆ್ಯಪ್ ಬಿಡುಗಡೆ ಮಾಡಿದ್ದಾರೆ. ಅವರ ವೈಯಕ್ತಿಕ ವೆಬ್'ಸೈಟ್'ನಲ್ಲಿ(NarendraModi.IN) ಹೆಚ್ಚಿನ ವಿವರ ನೀಡಲಾಗಿದೆ.

Add Asianetnews Kannada as a Preferred SourcegooglePreferred

ಆ್ಯಪ್ ಡೌನ್'ಲೋಡ್ ಹೇಗೆ?
* ಗೂಗಲ್ ಪ್ಲೇಸ್ಟೋರ್, ಆಪಲ್'ನ ಆ್ಯಪ್ ಸ್ಟೋರ್, ವಿಂಡೋಸ್ ಸ್ಟೋರ್'ಗಳಿಂದ ಡೌನ್'ಲೋಡ್ ಮಾಡಬಹುದು
* "1800 20 90 920" ಈ ನಂಬರ್'ಗೆ ಮಿಸ್ ಕಾಲ್ ಕೊಟ್ಟರೆ ಆ್ಯಪ್ ಡೌನ್'ಲೋಡ್ ಮಾಡಬಹುದು
* "http://www.narendramodi.in/downloadapp" ಇಲ್ಲಿ ನಿಮ್ಮ ಫೋನ್ ನಂಬರ್ ನೀಡಿದರೆ ಆ್ಯಪ್ ಡೌನ್'ಲೋಡ್ ಮಾಡಿಕೊಳ್ಳುವ ಲಿಂಕ್ ಸಿಗುತ್ತದೆ.