ಜನ ಪ್ರಾರ್ಥನೆಗೆ ಸಿದ್ಧವಾಗುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಪೊಲೀಸರು ಮಸೀದಿಯನ್ನು ಸುತ್ತುವರೆದಿದ್ದಾರೆ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.

ಕಾಬೂಲ್ (ನ.21): ಅಫ್ಘಾನಿಸ್ತಾನ ರಾಜಧಾನಿ ಕಾಬೂಲ್ ನ ಮಸೀದಿಯೊಂದರ ಮೇಲೆ ಉಗ್ರರು ಸೋಮವಾರ ಆತ್ಮಾಹುತಿ ಬಾಂಬ್ ದಾಳಿ ನಡೆಸಿದ್ದಾರೆ.

Add Asianetnews Kannada as a Preferred SourcegooglePreferred

ಉಗ್ರನೊಬ್ಬ ಶಿಯಾ ಸಮುದಾಯಕ್ಕೆ ಸೇರಿದ ಬಖಿರ್ ಉಲ್ ಒಲುಮ್ ಮಸೀದಿಯಲ್ಲಿ ತನ್ನನ್ನು ತಾನು ಸ್ಫೋಟಿಸಿಕೊಂಡಿದ್ದು, ದಾಳಿಯಲ್ಲಿ 27 ಮಂದಿ ಮೃತಪಟ್ಟಿದ್ದಾರೆ ಮತ್ತು 35 ಮಂದಿ ಗಾಯಗೊಂಡಿದ್ದಾರೆ ಎಂದು ಹಿರಿಯ ಪೊಲೀಸ್ ಅಧಿಕಾರಿ ಫ್ರಿದೋನ್ ಒಬೈದಿ ಅವರು ಹೇಳಿದ್ದಾರೆ.

ಜನ ಪ್ರಾರ್ಥನೆಗೆ ಸಿದ್ಧವಾಗುತ್ತಿದ್ದ ವೇಳೆ ಸ್ಫೋಟ ಸಂಭವಿಸಿದ್ದು, ಪೊಲೀಸರು ಮಸೀದಿಯನ್ನು ಸುತ್ತುವರೆದಿದ್ದಾರೆ ಎಂದು ಅವರು ತಿಳಿಸಿದ್ದಾರೆ.

(ಸಾಂದರ್ಭಿಕ ಚಿತ್ರ)