ಕೋಚ್‌'ನಲ್ಲಿ ಅನಾಥ ಸೂಟ್‌'ಕೇಸ್ ಒಂದು ಪತ್ತೆಯಾಗಿದ್ದು, ಅದನ್ನು ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ನಡೆಸುತ್ತಿದ್ದಾರೆ.
ಶಾಜಾಪುರ(ಮಾ.07): ಭೋಪಾಲ್-ಉಜ್ಜಯಿನಿ ಪ್ರಯಾಣಿಕ ರೈಲಿನಲ್ಲಿ ಸ್ಫೋಟ ಸಂಭವಿಸಿದ್ದು, 8 ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ 9.30ಕ್ಕೆ ಜನರಲ್ ಕೋಚ್'ನಲ್ಲಿ ಸ್ಫೋಟ ಸಂಭವಿಸಿದ್ದು ರೈಲು ಭೋಪಾಲ್'ನಿಂದ ಉಜ್ಜಯಿನಿಗೆ ತೆರಳುತ್ತಿತ್ತು. ಸ್ಥಳಕ್ಕೆ ಬಾಂಬ್ ನಿಷ್ಕ್ರಿಯ ದಳಗಳು ಆಗಮಿಸಿದ್ದು, ಸ್ಫೋಟಕ್ಕೆ ಕಾರಣ ಏನು ಎಂಬುದನ್ನು ಪತ್ತೆ ಮಾಡುತ್ತಿವೆ.
ಸ್ಫೋಟದ ತೀವ್ರತೆಗೆ ರೈಲಿನ ಸೀಲಿಂಗ್ ಹಾರಿ ಹೋಗಿದ್ದು, ಕಿಟಕಿ ಗಾಜುಗಳು ಒಡೆದು ಹೋಗಿವೆ. 2 ಕೋಚ್'ಗಳಿಗೆ ಹಾನಿಯಾಗಿದೆ. ಈ 2 ಕೋಚ್'ಗಳನ್ನು ರೈಲಿನಿಂದ ಪ್ರತ್ಯೇಕಿಸಿ, ರೈಲನ್ನು ಮುಂದಿನ ಯಾನಕ್ಕೆ ಕಳಿಸಿಕೊಡಲಾಯಿತು ಎಂದು ರೈಲ್ವೆ ಅಧಿಕಾರಿಗಳು ಹೇಳಿದ್ದಾರೆ.
ಕೋಚ್'ನಲ್ಲಿ ಅನಾಥ ಸೂಟ್'ಕೇಸ್ ಒಂದು ಪತ್ತೆಯಾಗಿದ್ದು, ಅದನ್ನು ಬಾಂಬ್ ನಿಷ್ಕ್ರಿಯ ದಳದವರು ಪರಿಶೀಲನೆ ನಡೆಸುತ್ತಿದ್ದಾರೆ.
ಸ್ಫೋಟ ಸಂಭವಿಸಿದ ಕೂಡಲೇ ಭಾರಿ ಹೊಗೆ ಬೋಗಿಯನ್ನು ಆವರಿಸಿತು. ಪ್ರಯಾಣಿಕರು ಭಯಭೀತರಾದರು ಎಂದು ಪ್ರತ್ಯಕ್ಷದರ್ಶಿಗಳು ಹೇಳಿದ್ದಾರೆ.
