Asianet Suvarna News Asianet Suvarna News

ಹೊಸ ವರ್ಷಕ್ಕೆಇಷ್ಟು ಪರ್ಸೆಂಟ್ KSRTC ದರ ಏರಿಕೆ ಪಕ್ಕಾ.. ಆದ್ರೆ BMTC ಲಕ ಲಕ!

ಬಿಎಂಟಿಸಿಗೆ ಒಂದುವರೆ ಸಾವಿರ  ಬಸ್ ಖರೀದಿ ಮಾಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.  1500 ಬಸ್‌ ಗಳನ್ನು ಲೀಸ್ ಮೇಲೆ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ ಎಂದು ಸಾರಿಗೆ ಸಚಿವ ಡಿಸಿ ತಮ್ಮಣ್ಣ ಹೇಳಿದ್ದಾರೆ. ಜತೆಗೆ ಸಾರಿಗೆ ದರ ಏರಿಕೆಯಾಗುವ ನಿರೀಕ್ಷೆಯಿದೆ ಎಂಬ ಶಾಕ್ ಸಹ ನೀಡಿದ್ದಾರೆ.

Expect hike in KSRTC fares in a week BMTC to add 3000 new buses
Author
Bengaluru, First Published Dec 27, 2018, 7:54 PM IST

ಬೆಂಗಳೂರು[ಡಿ.27]   ಹೊಸ ವರ್ಷಕ್ಕೆ ಕರ್ನಾಟಕದ ಜನರಿಗೆ ಸಾರಿಗೆ ಇಲಾಖೆ ದರ ಏರಿಕೆ ಶಾಕ್ ನೀಡಲಿದೆಯೇ?  ದರ ಏರಿಕೆ ಕುರಿತು ಸಿಎಂಗೆ ಪ್ರಸ್ತಾವನೆ ಸಲ್ಲಿಸಲು ಸಾರಿಗೆ ಇಲಾಖೆ ತೀರ್ಮಾನ ಮಾಡಿದೆ. ಡಿಸೆಲ್ ದರ 53 ರೂ. ಇದ್ದಾಗ ನಿಗದಿ ಮಾಡಿದ್ದ ದರವೇ ಈಗಲೂ ಇದೆ. ಹಾಗಾಗಿ ಶೇ. 18 ರಷ್ಟು ಬಸ್ ದರ ಏರಿಕೆಗೆ ಸಾರಿಗೆ ಇಲಾಖೆ ಮುಂದಾಗಿದೆ.

ಅಲ್ಲದೇ ಒತ್ತಡ ಕಡಿಮೆ ಮಾಡಲು ಬಿಎಂಟಿಸಿಗೆ ಒಂದುವರೆ ಸಾವಿರ  ಬಸ್ ಖರೀದಿ ಮಾಡಲು ರಾಜ್ಯ ಸರಕಾರ ಸಿದ್ಧತೆ ಮಾಡಿಕೊಂಡಿದೆ.  1500 ಬಸ್‌ ಗಳನ್ನು ಲೀಸ್ ಮೇಲೆ ತೆಗೆದುಕೊಳ್ಳಲು ತೀರ್ಮಾನ ಮಾಡಲಾಗಿದೆ.

ಬಿಎಂಟಿಸಿ ಗೆ ಒಟ್ಟು ಮೂರು ಸಾವಿರ ಹೊಸ ಬಸ್ ನೀಡಲು ನಿರ್ಧಾರ ಮಾಡಲಾಗಿದೆ. ವಾಯವ್ಯ ಕರ್ನಾಟಕ ಸಾರಿಗೆಗೆ 313 ಬಸ್ ಖರೀದಿಸಲು ಸಾರಿಗೆ ಇಲಾಖೆ ತೀರ್ಮಾನ ಮಾಡಿದೆ ಎಂದು  ತಮ್ಮಣ್ಣ ತಿಳಿಸಿದ್ದಾರೆ.

ಚೆಕ್ ಪೋಸ್ಟ್ ಗಳಲ್ಲಿ ವಸೂಲಿ ಹೆಚ್ಚಿದೆ ಎಂಬ ಆರೋಪದ ಬಗ್ಗೆಯೂ ಮಾತನಾಡಿದ ತಮ್ಮಣ್ಣ, ಚೆಕ್ ಪೋಸ್ಟ್ ಗಳನ್ನ ಮೇಲ್ದರ್ಜೆಗೇರಿಸಲು ಚಿಂತನೆ ನಡೆದಿದೆ. ವೆಹಿಕಲ್ ಟ್ರ್ಯಾಕಿಂಗ್ ಸಿಸ್ಟಮ್ ಅಳವಡಿಸುತ್ತೇವೆ. ಎಲ್ಲಾ ಚೆಕ್ ಪೋಸ್ಟ್ ಗಳಲ್ಲೂ ಸಿಸಿ ಕ್ಯಾಮೆರಾ ಅಳವಡಿಕೆ ಮಾಡಲಾಗುತ್ತದೆ ಎಂದು ತಿಳಿಸಿದರು.

ಪ್ರತಿಯೊಂದು ವ್ಯವಹಾರ ರೆಕಾರ್ಡಿಂಗ್ ಮಾಡಿಯೇ ಇಡುತ್ತೇವೆ.  ಪಾರ್ಕಿಂಗ್ ಸಮಸ್ಯೆ ಬಗ್ಗೆ ಮೊದಲು ಸಾರ್ವಜನಿಕರಲ್ಲಿ ತಿಳಿವಳಿಕೆ ಮೂಡಿಸುವ ಕೆಲಸ ಆಗಬೇಕಿದೆ. ಒಂದು ವರ್ಷದ ಬಳಿಕ ಹಂತ ಹಂತವಾಗಿ ಕಾನೂನು ಜಾರಿಗೆ ತಂದು ಬಳಿಕ ಪಾರ್ಕಿಂಗ್ ವ್ಯವಸ್ಥೆ ಇದ್ದವರಿಗೆ ಕಾರು ಖರಿದಿಸಲು ಪರವಾನಿಗೆ ಬಗ್ಗೆ ಸ್ಪಷ್ಟ ಕಾನೂನು ತರುತ್ತೇವೆ ಎಂದು ತಿಳಿಸಿದರು.

Follow Us:
Download App:
  • android
  • ios