500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿರುವ ನೇರ ಪರಿಣಾಮ ಈಗ ಸಹಕಾರಿ ಬ್ಯಾಂಕ್'​ಗಳ ಮೇಲಾಗಿದೆ. ಸಾಲ ಮರುಪಾವತಿಗೆ ಹಳೆಯ ನೋಟುಗಳನ್ನು ಪಡೆಯದಂತೆ ಸಹಕಾರಿ ಮತ್ತು ಡಿಸಿಸಿ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದ ಬ್ಯಾಂಕ್​ಗಳ ವಹಿವಾಟಿಗೆ ತೊಂದರೆ ಉಂಟಾಗಿದೆ.

ನವದೆಹಲಿ(ನ.16): 500 ರೂಪಾಯಿ ಹಾಗೂ 1000 ರೂಪಾಯಿ ನೋಟುಗಳನ್ನು ರದ್ದುಪಡಿಸಿರುವ ನೇರ ಪರಿಣಾಮ ಈಗ ಸಹಕಾರಿ ಬ್ಯಾಂಕ್'​ಗಳ ಮೇಲಾಗಿದೆ. ಸಾಲ ಮರುಪಾವತಿಗೆ ಹಳೆಯ ನೋಟುಗಳನ್ನು ಪಡೆಯದಂತೆ ಸಹಕಾರಿ ಮತ್ತು ಡಿಸಿಸಿ ಬ್ಯಾಂಕ್​ಗಳಿಗೆ ಕೇಂದ್ರ ಸರ್ಕಾರ ಸೂಚನೆ ನೀಡಿದೆ. ಇದರಿಂದ ಬ್ಯಾಂಕ್​ಗಳ ವಹಿವಾಟಿಗೆ ತೊಂದರೆ ಉಂಟಾಗಿದೆ.

ನವೆಂಬರ್ 24ರವರೆಗೂ ಆಸ್ಪತ್ರೆ, ಮೆಡಿಕಲ್, ಪೆಟ್ರೋಲ್ ಬಂಕ್, ರೈಲ್ವೇ, ಸಾರಿಗೆ ಇಲ್ಲೆಲ್ಲ ಹಳೇ ನೋಡು ಪಡೆಯಬೇಕೆಂದು ಕೇಂದ್ರ ಸರ್ಕಾರ ಆದೇಶ ಹೊರಡಿಸಿದೆ. ಆದರೆ, ರೈತರ ಆಧಾರಿತ ಸಹಕಾರಿ ಬ್ಯಾಂಕ್​'ಗಳಲ್ಲಿ ಮಾತ್ರ ಈ ನೋಟು ತೆಗೆದುಕೊಳ್ಳುವಂತಿಲ್ಲ. ಸಹಕಾರಿ ಬ್ಯಾಂಕ್​'ಗಳಲ್ಲಿ ಹಳೆಯ ನೋಟುಗಳನ್ನು ಡೆಪಾಸಿಟ್​ ಮಾಡಿಕೊಳ್ಳಬಾರದು ಮತ್ತು ಹಳೆಯ ನೋಟುಗಳ ಮೂಲಕ ಸಾಲ ಮರುಪಾವತಿ ಮಾಡಿಸಿಕೊಳ್ಳಬಾರದು ಎಂದು ರಿಸರ್ವ್​ ಬ್ಯಾಂಕ್​ ಸುತ್ತೋಲೆ ಹೊರಡಿಸಿದ್ದು, ರೈತರು ಹಾಗೂ ಸಹಕಾರಿ ಬ್ಯಾಂಕ್​'ಗಳು ಕಂಗಾಲಾಗುವಂತೆ ಮಾಡಿದೆ.

ಕಪ್ಪು ಹಣ ಸಹಕಾರಿ ಬ್ಯಾಂಕ್​ ಸೇರುತ್ತಿದೆ ಎಂಬ ಗುಮಾನಿ: ಸಹಕಾರಿ ಬ್ಯಾಂಕ್​ಗಳಲ್ಲಿ ಹಳೇ ನೋಟು ಚಲಾವಣೆ ರದ್ದು 

ರಾಷ್ಟ್ರೀಕೃತ ಬ್ಯಾಂಕ್'​ಗಳಲ್ಲಿ ಹಳೆಯ ನೋಟುಗಳನ್ನು ಪಡೆಯುವ ವ್ಯವಸ್ಥೆಯಿಂದ ಸಹಕಾರಿ ಬ್ಯಾಂಕ್​ಗಳನ್ನ ಹೊರಗಿಟ್ಟಿದ್ದು ಯಾಕೆ ಎನ್ನುವ ಪ್ರಶ್ನೆ ಎದುರಾಗುತ್ತದೆ. ಬಹುಶಃ ಕಪ್ಪು ಹಣ ಸಹಕಾರಿ ಬ್ಯಾಂಕ್​ ಸೇರುತ್ತಿದೆ ಎಂಬ ಗುಮಾನಿಯಿಂದ ರಿಸರ್ವ್​ ಬ್ಯಾಂಕ್​ ಇಂಥಹುದ್ದೊಂದು ಸುತ್ತೋಲೆ ಹೊರಡಿಸಿರಬಹುದು. ಆದರೆ, ಕೇಂದ್ರದ ಈ ನಿರ್ಧಾರದಿಂದ ವ್ಯವಹಾರಕ್ಕೆ ತೊಂದರೆ ಆಗಿದೆ ಎನ್ನುವುದು ರಾಜ್ಯ ಸಹಕಾರ ಸಚಿವರ ವಾದ.

ಒಟ್ಟಾರೆ, ಸಾವಿರ, ಐದುನೂರು ರೂಪಾಯಿ ಹಳೇ ನೋಟು ಬ್ಯಾನ್'​ನಿಂದ ಜನ ಎಟಿಎಂಗಳ ಎದುರು ಕ್ಯೂ ನಿಲ್ಲುವ ಸಂಕಷ್ಟ. ಆದರೆ, ಸಹಕಾರ ಬ್ಯಾಂಕ್'​ಗಳಲ್ಲೂ ಹಳೇ ನೋಟು ಚಲಾವಣೆಕಳೆದುಕೊಂಡಿದ್ದು ರೈತರು ಹಾಗೂ ಸಹಕಾರಿ ಬ್ಯಾಂಕ್​ಗಳ ನಿದ್ದೆಗೆಡಿಸಿದ್ದಂತೂ ಸತ್ಯ.