ನೋಟು ನಿಷೇಧ ಗದ್ದಲ ಸಂಸತ್ ಅಧಿವೇಶನದ ನಾಲ್ಕನೇ ದಿನವೂ ಸದ್ದು ಮಾಡಿದ್ದು, ಸಂಸತ್ತಿಗೆ ಉತ್ತರ ಕೊಡಲು ನಿರಾಕರಿಸಿದ್ದಾರೆಂದು ಮೋದಿ ವಿರುದ್ಧ ಸಂಸತ್ ನಿಂದನೆ ನೋಟಿಸ್ ಜಾರಿಗೊಳಿಸಲು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪ್ರತಿಪಕ್ಷವನ್ನು ಸಂಪರ್ಕಿಸಿದ್ದಾರೆ.
ನವದೆಹಲಿ (ನ.22): ನೋಟು ನಿಷೇಧ ಗದ್ದಲ ಸಂಸತ್ ಅಧಿವೇಶನದ ನಾಲ್ಕನೇ ದಿನವೂ ಸದ್ದು ಮಾಡಿದ್ದು, ಸಂಸತ್ತಿಗೆ ಉತ್ತರ ಕೊಡಲು ನಿರಾಕರಿಸಿದ್ದಾರೆಂದು ಮೋದಿ ವಿರುದ್ಧ ಸಂಸತ್ ನಿಂದನೆ ನೋಟಿಸ್ ಜಾರಿಗೊಳಿಸಲು ಸಿಪಿಐ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿ ಪ್ರತಿಪಕ್ಷವನ್ನು ಸಂಪರ್ಕಿಸಿದ್ದಾರೆ.
ಚಳಿಗಾಲದ ಸಂಸತ್ ಅಧಿವೇಶನ ಪ್ರಾರಂಭವಾಗಿದೆ. ನೋಟು ನಿಷೇಧ ಗದ್ದಲದಿಂದ ಕಲಾಪವು ಸರಿಯಾಗಿ ನಡೆಯುತ್ತಿಲ್ಲ. ನಾಲ್ಕನೇ ದಿನವಾದ ಇಂದು ಕೂಡಾ ಅಧಿವೇಶನ ನಡೆದಿಲ್ಲ.
ಪ್ರಧಾನಿ ನರೇಂದ್ರ ಮೋದಿಯವರು ಸಂಸತ್ ಚರ್ಚೆಯಲ್ಲಿ ಭಾಗವಹಿಸಿ ಪ್ರತಿಪಕ್ಷದವರ ಪ್ರಶ್ನೆಗೆ ಉತ್ತರಿಸಬೇಕು. ಆದರೆ ಇದುವರೆಗೂ ಅವರು ಸಂಸತ್ ಅಧಿವೇಶನದಲ್ಲಿ ಅವರು ಭಾಗವಹಿಸದೇ ಇರುವುದರಿಂದ ಕಲಾಪ ಸುಗಮವಾಗಿ ನಡೆಯುತ್ತಿಲ್ಲ. ಇದಕ್ಕೆ ಪ್ರಧಾನಿಯವರೇ ನೇರ ಹೊಣೆ ಎಂದು ಯೆಚೂರಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
