ಗೌಡರಿಗೆ ದಿಲ್ಲಿಯಲ್ಲೇನು ಕೆಲಸ?

Ex PM HD Devegowda Visits AIIMS hospital to check on former Prime Minister Atal Bihari Vajpayees health
Highlights

  • ವಾಜಪೇಯಿ ಆರೋಗ್ಯ ವಿಚಾರಿಸಲೆಂದು ದೆಹಲಿಗೆ ಭೇಟಿ
  • ಗುಲಾಂ ನಬಿ ಆಜಾದ್ ಇಫ್ತಾರ್ ಕೂಟಕ್ಕೆ ಗೈರು

ವಾಜಪೇಯಿ ಆರೋಗ್ಯ ವಿಚಾರಿಸಲೆಂದು ದೆಹಲಿಗೆ ಬಂದಿದ್ದ ದೇವೇಗೌಡರನ್ನು ಗುಲಾಂ ನಬಿ ಆಜಾದ್ ರಾಹುಲ್ ಗಾಂಧಿಯವರ ಇಫ್ತಾರ್ ಕೂಟಕ್ಕೆ ಎಷ್ಟೇ ಕರೆದರೂ ಬರಲಿಲ್ಲ. ಬೆಂಗಳೂರಿನಲ್ಲಿ ನಾವೂ ಇಟ್ಟುಕೊಂಡಿದ್ದೇವೆ, ನಮ್ಮ ಡ್ಯಾನಿಶ್ ಅಲಿ ನಿಮ್ಮ ಇಫ್ತಾರ್‌ಗೆ ಬರುತ್ತಾರೆ ಎಂದು ಹೇಳಿ ವಿಮಾನ ಹತ್ತಿ ಹೊರಟೇಬಿಟ್ಟರು.

ತಮ್ಮ ದೆಹಲಿ ಮನೆಯ ಹೊರಗಡೆ ನಿಂತಿದ್ದ ಕನ್ನಡದ ಪತ್ರಕರ್ತರಿಗೆ ‘ಅಯ್ಯೋ ದೆಹಲಿಯಲ್ಲೇನೂ ಕೆಲಸ ಇಲ್ಲ. ನನಗೀಗ ಬೆಂಗಳೂರಿನಲ್ಲಿ ಮಾಡಲು ತುಂಬಾ ಕೆಲಸವಿದೆ’ ಎಂದು ಮುಗುಮ್ಮಾಗಿ ನಗುತ್ತಲೇ ಹೊರಟರು. ಅಧಿಕಾರ ಇಲ್ಲದಿದ್ದಾಗ ದೆಹಲಿಗೆ ಬಂದು ಕನ್ನಡ ಮಾಧ್ಯಮಗಳನ್ನು ಕರೆದು ಗೌಡರು ಗಂಟೆಗಟ್ಟಲೆ ಗೌಡರು ಮಾತನಾಡಿಸುತ್ತಿದ್ದುದುಂಟು.

(ಪ್ರಶಾಂತ್ ನಾತು ಅವರ ಅಂಕಣದ ಆಯ್ದ ಭಾಗ)

loader