ಬಾಬ್ಬಿ ಜಿಂದಾಲ್ ಎರಡು ಬಾರಿ ಲೂಸಿಯಾನದ ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
ವಾಷಿಂಗ್ಟನ್(ಸೆ.30): ಇತ್ತೀಚೆಗಷ್ಟೇ ತಮ್ಮ ಅಧಿಕೃತ ಪ್ರವಾಸಕ್ಕೆ ಖಾಸಗಿ ವಿಮಾನಗಳನ್ನು ಬಳಸಿದ ಆರೋಪ ಎದುರಿಸುತ್ತಿರುವ ಡೊನಾಲ್ಡ್ ಟ್ರಂಪ್ ಸಚಿವ ಸಂಪುಟ ಆರೋಗ್ಯ ಸಚಿವ ಟಾಮ್ ಪ್ರೈಸ್ ರಾಜೀನಾಮೆ ನೀಡಿದ ಬೆನ್ನಲ್ಲೇ ಭಾರತೀಯ ಮೂಲದ ಮಾಜಿ ಗವರ್ನರ್ ಬಾಬಿ ಜಿಂದಾಲ್ ಅಥವಾ ಸೀಮಾ ವರ್ಮಾ ಈ ಹುದ್ದೆ ಅಲಂಕರಿಸುವ ಸಾಧ್ಯತೆಯಿದೆ ಎಂದು ಹೇಳಲಾಗುತ್ತಿದೆ.
ಕಳೆದ ವರ್ಷದ ಅಮೆರಿಕ ಅಧ್ಯಕ್ಷೀಯ ಚುನಾವಣೆಯಲ್ಲಿ ಡೊನಾಲ್ಡ್ ಟ್ರಂಪ್ ಅವರ ವಿರುದ್ಧ ಸ್ಪರ್ಧಿಸಿ ಸೋಲನ್ನನುಭವಿಸಿದ್ದ ಭಾರತ ಮೂಲದ ಬಾಬ್ಬಿ ಜಿಂದಾಲ್ ಅವರು ಟ್ರಂಪ್ ಸಚಿವ ಸಂಪುಟದಲ್ಲಿ ಸಚಿವರಾಗುವ ಸಾಧ್ಯತೆ ಹೆಚ್ಚಿದೆ.
ಟಾಮ್ ಪ್ರೈಸ್ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ ಬಳಿಕ ಅಲ್ಲಿನ ಮಾಧ್ಯಮಗಳು ಮುಂದಿನ ಆರೋಗ್ಯ ಸಚಿವರಾಗುವ ಅರ್ಹತೆಯಿರುವ ಅಭ್ಯರ್ಥಿಗಳ ಪಟ್ಟಿಯನ್ನು ಸಿದ್ಧಪಡಿಸಿದ್ದು, ಅದರಲ್ಲಿ ಬಾಬ್ಬಿ ಜಿಂದಾಲ್ ಮತ್ತು ವರ್ಮಾ ಅಗ್ರ ಸ್ಥಾನದಲ್ಲಿದ್ದಾರೆ.
ಬಾಬ್ಬಿ ಜಿಂದಾಲ್ ಎರಡು ಬಾರಿ ಲೂಸಿಯಾನದ ಗವರ್ನರ್ ಆಗಿಯೂ ಕಾರ್ಯ ನಿರ್ವಹಿಸಿದ್ದಾರೆ.
