ಪಾಕ್ ಗೆ ರಹಸ್ಯ ಮಾಹಿತಿ : ಮಾಧುರಿಗೆ 3 ವರ್ಷ ಜೈಲು

Ex-diplomat Madhuri Gupta gets three years in jail for spying
Highlights

ಭಾರತದ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಶತ್ರು ರಾಷ್ಟ್ರ ಪಾಕಿಸ್ತಾನ ಗೂಢಚಾರ ಸಂಸ್ಥೆಯೊಂದಿಗೆ ಹಂಚಿಕೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥೆಯಾದ ಪಾಕಿ ಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯ ಮಾಜಿ ಸಿಬ್ಬಂದಿ ಮಾಧುರಿ ಗುಪ್ತಾಗೆ 3 ವರ್ಷಗಳ ಕಾರಾ ಗೃಹ ಶಿಕ್ಷೆ ವಿಧಿಸಲಾಗಿದೆ. 

ನವದೆಹಲಿ[ಮೇ 20] : ಭಾರತದ ಕೆಲವು ಸೂಕ್ಷ್ಮ ಮಾಹಿತಿಗಳನ್ನು ಶತ್ರು ರಾಷ್ಟ್ರ ಪಾಕಿಸ್ತಾನ ಗೂಢಚಾರ ಸಂಸ್ಥೆಯೊಂದಿಗೆ ಹಂಚಿಕೆ ಮಾಡಿದ ಪ್ರಕರಣದಲ್ಲಿ ತಪ್ಪಿತಸ್ಥೆಯಾದ ಪಾಕಿ ಸ್ತಾನದಲ್ಲಿನ ಭಾರತೀಯ ರಾಯಭಾರ ಕಚೇರಿಯ ಮಾಜಿ ಸಿಬ್ಬಂದಿ ಮಾಧುರಿ ಗುಪ್ತಾಗೆ 3 ವರ್ಷಗಳ ಕಾರಾ ಗೃಹ ಶಿಕ್ಷೆ ವಿಧಿಸಲಾಗಿದೆ. 

ಪಾಕಿಸ್ತಾನದಲ್ಲಿ ಭಾರತದ ರಾಯಭಾರಿ ಯಾಗಿದ್ದ ಮಾಧುರಿ ಗುಪ್ತಾ ಅವರು ಪಾಕ್ ಗುಪ್ತಚರ ಸಂಸ್ಥೆಯ ಏಜೆಂಟ್‌ರೊಂದಿಗೆ ಪ್ರೀತಿಯ ಸೆಲೆಗೆ ಸಿಲುಕಿ ದ್ದರು. ಈ ವೇಳೆ ಭಾರತದ ವಿರುದ್ಧವೇ ಬೇಹುಗಾರಿಕೆ ನಡೆಸಿದ್ದರು. ಈ ಬಗ್ಗೆ ಶನಿವಾರ ವಿಚಾರಣೆ ನಡೆಸಿದ ದಿಲ್ಲಿಯ ಹೆಚ್ಚುವರಿ ಸೆಷನ್ಸ್ ಜಡ್ಜ್ ಸಿದ್ಧಾರ್ಥ ಶರ್ಮಾ, ಕಾನೂನಿನಡಿ ರಕ್ಷಣೆ ಮಾಡಬೇಕಾದ ಮಾಹಿತಿ ಗಳನ್ನು ಶತ್ರು ರಾಷ್ಟ್ರಕ್ಕೆ ನೀಡಿದ್ದಕ್ಕಾಗಿ ಮಾಧುರಿ ಗುಪ್ತಾಗೆ 3 ವರ್ಷ ಜೈಲು ಶಿಕ್ಷೆ ವಿಧಿಸಿ, ಆದೇಶಿಸಿದ್ದಾರೆ. 

ಆದಾಗ್ಯೂ, ಮಾಧುರಿಗೆ ಜಾಮೀನು ನೀಡಿರುವ ಕೋರ್ಟ್, ನಿರ್ದೋಷಿ ಎಂಬುದಾಗಿ ಸಾಬೀತುಪಡಿಸಲು ಮೇಲ್ಮನವಿ ಸಲ್ಲಿಸಲು ಮಾಧುರಿಗೆ ಅವಕಾಶ ಕಲ್ಪಿಸಿದೆ.

loader