ಮುಂಬೈ (ಜೂ.17): ದೇವೇಂದ್ರ ಫಡ್ನವೀಸ್‌ ನೇತೃತ್ವದ ಮಹಾರಾಷ್ಟ್ರದ ಬಿಜೆಪಿ ಸರ್ಕಾರದ ಸಚಿವ ಸಂಪುಟ ಭಾನುವಾರ ವಿಸ್ತರಣೆಯಾಗಿದೆ. 

ಕ್ಯಾಬಿನೆಟ್‌ ಸಚಿವರಾಗಿ ರಾಧಾಕೃಷ್ಣ ವಿಖೆ ಪಾಟೀಲ್‌, ಮುಂಬೈ ಬಿಜೆಪಿ ಮುಖ್ಯಸ್ಥ ಆಶಿಶ್‌ ಶೆಲ್ಲರ್‌ ಸೇರಿದಂತೆ 3 ಜನರು ಅಧಿಕಾರ ಸ್ವೀಕರಿಸಿದರು. ವಿಪಕ್ಷ ನಾಯಕರಾಗಿದ್ದ ರಾಧಾಕೃಷ್ಣ ವಿಖೆ ಪಾಟೀಲ್‌ ಕಾಂಗ್ರೆಸ್‌ ತ್ಯಜಿಸಿ ಇತ್ತೀಚಿಗೆ ಬಿಜೆಪಿ ಸೇರ್ಪಡೆಯಾಗಿದ್ದರು. 

ಇವರ ಜತೆಗೆ 5 ಜನ ಸಹಾಯಕ ಸಚಿವರು ಸೇರಿದಂತೆ ಎಂಟು ಜನರು ಸಚಿವ ಸಂಪುಟದಲ್ಲಿ ಸ್ಥಾನ ಪಡೆದುಕೊಂಡಿದ್ದಾರೆ. ಸೋಮವಾರದಿಂದ ಫಡ್ನವೀಸ್‌ ಸರ್ಕಾರದ ಅಧಿವೇಶನ ಸಹ ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಸಂಪುಟ ವಿಸ್ತರಣೆ ಕೈಗೊಳ್ಳಲಾಗಿದೆ. ಪ್ರಸ್ತುತ ಬಿಜೆಪಿ ಸರ್ಕಾರದ ಅವಧಿ ಕೇವಲ 4 ತಿಂಗಳಿದೆ.